ಸುರೇಶ ಹೆಬ್ಳೀಕರ ಹೆಸರಲ್ಲಿ ಹಣ ಕೇಳಿದ ಇಮೇಲ್ ಹ್ಯಾಕರ್ಸ್!

359

ನಟ, ನಿರ್ದೇಶಕ ಹಾಗೂ ಪರಿಸರ ಹೋರಾಟಗಾರ ಸುರೇಶ ಹೆಬ್ಳೀಕರ ಅವರ ಇಮೇಲ್ ಹ್ಯಾಕ್ ಮಾಡಿದ ಖದೀಮರು, ಅವರ ಹೆಸರಿನಲ್ಲಿ ಹಣ ಕೇಳಿದ್ದಾರೆ. ಸುರೇಶ ಅವರ ಹೆಸರಿನಲ್ಲಿ ಸ್ನೇಹಿತರಿಗೆ ಮೇಲ್ ಮಾಡಿ 95 ಸಾವಿರ ರೂಪಾಯಿ ಕೇಳಿದ್ದಾರೆ.

ಸೈಬರ್ ಕ್ರೈಂ ಕಿರಾತಕರು ಇಮೇಲ್ ಹ್ಯಾಕ್ ಮಾಡಿ, ನಾನು ಉಕ್ರೇನಲ್ಲಿದ್ದೇನೆ. ತುರ್ತಾಗಿ 95 ಸಾವಿರ ರೂಪಾಯಿ ಹಾಕಿ ಎಂದು ಹೆಬ್ಳೀಕರ ಅವರ ಪರಿಚಯಸ್ಥರಿಗೆ ಮೇಲ್ ಮಾಡಿದ್ದಾರೆ. ಈ ವಿಷ್ಯ ತಿಳಿದ ಅವರು ತಮ್ಮ ಇಮೇಲ್ ಪಾಸ್ವರ್ಡ್ ಚೇಂಜ್ ಮಾಡಿದ್ದಾರೆ. ಬಳಿಕ ಯಾರಿಗೂ ಹಣ ಕೊಡಬೇಡಿ ಎಂದು ಮೆಸೇಜ್ ಕಳುಹಿಸಿದ್ದಾರೆ. ನಂತ್ರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!