ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಮರು ಪ್ರಕಟ

167

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ನವೆಂಬರ್ 18, 2022ರಂದು ಶಿಕ್ಷಣ ಇಲಾಖೆ ಪ್ರಕಟಿಸಿದ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಹೈಕೋರ್ಟ್ ರದ್ದು ಪಡಿಸಿತ್ತು. ಜೊತೆಗೆ ಮರು ಪಟ್ಟಿ ಪ್ರಕಟಿಸುವಂತೆ ಸೂಚಿಸಿತ್ತು. ಅದರಂತೆ ಇದೀಗ 1:1 ಅನುಪಾತದಲ್ಲಿ ಪಟ್ಟಿ ಪ್ರಕಟಿಸಲಾಗಿದೆ.

15 ಸಾವಿರ ಹುದ್ದೆಯಲ್ಲಿ 13,351 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. 2022ರ ಪದವೀಧರ ಪ್ರಾಥಮಿಕ ಶಿಕ್ಷಕ ವಿಭಾಗದ ಹುದ್ದೆಗಳಿಗೆ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬಳಿಕ 1:2 ಅನುಪಾತದಲ್ಲಿ ಪರಿಶೀಲನಾ ಪಟ್ಟಿ ಪ್ರಕಟಿಸಲಾಗಿತ್ತು. ನಂತರ 1:1 ಅನುಸಾರ ನವೆಂಬರ್ 18, 2022ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ವಿವಾಹಿತ ಮಹಿಳೆಯರು ಆನ್ ಲೈನ್ ಅರ್ಜಿಯಲ್ಲಿ ವಿವಾಹಿತರು ಎಂದು ನಮೋದಿಸಿ ಪತಿಯ ಹೆಸರು ಬರೆದಿದ್ದರು. ಆದರೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ತಂದೆಯನ್ನು ಲಗತ್ತಿಸಿದ್ದರು. ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಲಾಗಿತ್ತು.

ಈಗ ಹೈಕೋರ್ಟ್ ತೀರ್ಪಿನಂತೆ 1:1 ಅನುಪಾತದಲ್ಲಿ ಇಲಾಖೆಯ https://schooleducation.kar.nic.in ವೆಬ್ ಸೈಟ್ ನಲ್ಲಿ ಮುರು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ನೋಡಬಹುದು. ಜೊತೆಗೆ ಏನಾದರೂ ಆಕ್ಷೇಪವಿದ್ದರೆ ಜಿಲ್ಲೆಯ ಉಪನಿರ್ದೇಶಕರು ಹಾಗೂ ನೇಮಕಾತಿ ಪ್ರಾಧಿಕಾರ ಅವರ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಖುದ್ಧಾಗಿ ಸಲ್ಲಿಸಬೇಕು. ಮಾರ್ಚ್ 1, 2023ರಿಂದ ಮಾರ್ಚ್ 4, 2023ರ ತನಕ ಆಕ್ಷೇಪಣೆಗೆ ಕಾಲಾವಕಾಶವಿದೆ. ನಂತರ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!