ಠಾಕ್ರೆ-ಶಿಂಧೆ ಬಣಕ್ಕೆ ಬಹುಮತದ ಡೆಡ್ ಲೈನ್

641

ಪ್ರಜಾಸ್ತ್ರ ಸುದ್ದಿ

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಕಳೆದೊಂದು ತಿಂಗಳಲ್ಲಿ ಏನೆಲ್ಲ ನಡೆದು ಹೋಗಿದೆ ಅನ್ನೋದು ಇಡೀ ದೇಶಕ್ಕೆ ಗೊತ್ತಾಗಿದೆ. ಆದರೆ, ಅದು ಅಲ್ಲಿಗೆ ನಿಂತಿಲ್ಲ. ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಗೂ ಸಿಎಂ ಏಕನಾಥ್ ಶಿಂಧೆ ನಡುವೆ ಮುಂದುವರೆದಿದೆ. ಅದು ಪಕ್ಷದ ಅಧಿಕೃತ ಚಿನ್ಹೆಗಾಗಿ

ಶಿವಸೇನೆ ಪಕ್ಷವನ್ನು ಇಬ್ಬರು ನಾಯಕರು ಮುನ್ನಡೆಸುತ್ತಿದ್ದಾರೆ. ಇದರಲ್ಲಿ ಯಾವುದು ನಿಜವಾದ ಶಿವಸೇನೆ ಪಡೆ ಅನ್ನೋದು ತಿಳಿಯಬೇಕಿದೆ. ಯಾಕಂದರೆ, ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಸಿಎಂ ಆಗಿದ್ದಾರೆ. ಈ ಕಾರಣಕ್ಕೆ ಆಗಸ್ಟ್ 8ರೊಳಗೆ ದಾಖಲೆಗಳನ್ನು ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಚುನಾವಣೆ ಆಯೋಗಕ್ಕೆ ಪತ್ರ ಬರೆದಿರುವ ಶಿಂಧೆ ಪಡೆ 55 ಶಾಸಕರಲ್ಲಿ 40 ಶಾಸಕರು ಹಾಗೂ 18 ಸಂಸದರಲ್ಲಿ 12 ಸಂಸದರು ತಮ್ಮೊಂದಿಗಿದೆ ಎಂದಿದೆ. ಹೀಗಾಗಿ ಇದರ ಕುರಿತು ಲಿಖಿತ ಸಾಕ್ಷಿ, ದಾಖಲೆಗಳನ್ನು ಆಹ್ವಾನಿಸಲು ಆಯೋಗ ಸೂಚಿಸಿದೆ. ಇದಾದ ನಂತರವೇ ಮುಂದಿನ ಕ್ರಮವೆಂದು ಹೇಳಿದೆ. ಠಾಕ್ರೆ ತಂದೆ ಬಾಳಾಸಾಹೇಬ್ ಠಾಕ್ರೆ ಕಟ್ಟಿದ ಶಿವಸೇನೆ ಯಾರ ಪಾಲಾಗುತ್ತೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!