14 ವರ್ಷದ ಬಾಲಕಿ ಮದುವೆಯಾದ ಅಂಕಲ್ ಪೊಲೀಸರ ಅತಿಥಿ

345

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಡ ಕುಟುಂಬಕ್ಕೆ ಹಣದ ಆಸೆ ತೋರಿಸಿ 14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ 45 ವರ್ಷದ ಅಂಕಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಜೊತೆಗೆ ಮಗಳ ಭವಿಷ್ಯಕ್ಕೆ ಕಲ್ಲು ಹಾಕಿದ್ದ ಹೆತ್ತವರು ಕಂಬಿ ಹಿಂದೆ ಸೇರಿದ್ದಾರೆ.

45 ವರ್ಷದ ಗುರುಪ್ರಾಸದ್ ಎಂಬಾತ 18 ವರ್ಷಗಳ ಹಿಂದೆಯೇ ಮದುವೆಯಾಗಿದ್ದಾನೆ. 17 ವರ್ಷದ ಮಗ ಸಹ ಇದ್ದಾನೆ. ಕೆಲ ವರ್ಷಗಳಿಂದ ಹೆಂಡತಿಯಿಂದ ದೂರವಾಗಿರುವ ಈತ, ಬಾಲಕಿಯ ಮೇಲೆ ಕಣ್ಣಾಕಿ, ಆಕೆ ಪೋಷಕರಿಗೆ ಹಣದಾಸೆ ತೋರಿಸಿ ಸೆಪ್ಟೆಂಬರ್ 7ರಂದು ಬೆಂಗಳೂರಿನ ಹೊರವಲಯದಲ್ಲಿ ಮದುವೆಯಾಗಿದ್ದಾನೆ.

ಬಾಲಕಿಯ ವಿರೋಧದ ನಡುವೆಯೂ ಬಲವಂತದಿಂದ ಮದುವೆ ಮಾಡಿದ್ದಾರೆ. ನಂತರ ಬಾಲಕಿ ತನ್ನ ಪರಿಚಯಸ್ಥರ ಬಳಿ ತನ್ನ ನೋವು ತೊಡಿಕೊಂಡಿದ್ದಾಳೆ. ಅವರು ಆಕೆಯ ನೆರವಿಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು ಗುರುಪ್ರಸಾದ್ ಹಾಗೂ ಬಾಲಕಿ ಪೋಷಕರನ್ನು ವಶಕ್ಕೆ ಪಡೆದಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!