ಎಟಿಎಂ ವಹಿವಾಟಿನ ಶುಲ್ಕ ಹೆಚ್ಚಳ

285

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬ್ಯಾಂಕ್ ಗ್ರಾಹಕರಿಗೆ ಹೊಸ ವರ್ಷಕ್ಕೆ ಉಡುಗರೆ ಬದಲು ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಲಾಗುತ್ತಿದೆ. ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಮೇಲಿನ ವಹಿವಾಟಕ್ಕೆ ಶುಲ್ಕು ವಿಧಿಸಲು ನಿರ್ಧರಿಸಲಾಗಿದೆ.

ಉಚಿತ ವಹಿವಾಟಿನ ಮಿತಿ ಮೀರಿದ ಹೆಚ್ಚುವರಿ ವ್ಯವಹಾರಕ್ಕೆ 21 ರೂಪಾಯಿ ಹಾಗೂ ಜಿಎಸ್ಟಿಡಬ್ಲುಎಫ್ ಶುಲ್ಕುವನ್ನು ವಿಧಿಸಲಾಗುತ್ತಿದೆ ಎಂದು ಆಕ್ಸಿಸ್ ಬ್ಯಾಂಕ್ ತಿಳಿಸಿದೆ. ಇದು ಜನವರಿ 1, 2022ರಿಂದ ಜಾರಿಗೆ ಬರಲಿದೆ. ಆರ್ ಬಿಐ ಈ ಹಿಂದಿನ ಸುತ್ತೋಲೆಯಲ್ಲಿ ಹೆಚ್ಚಿನ ಶುಲ್ಕ ಹಾಗೂ ಹೆಚ್ಚುವರಿ ವಹಿವಾಟಿನ ಹೆಚ್ಚಳ ಗಮನಿಸಿದರೆ 21 ರೂಪಾಯಿಗೂ ಹೆಚ್ಚಿಸಲು ಅನುಮತಿ ನೀಡಲಾಗಿದೆ.

ಈಗಾಗ್ಲೇ ಕೆಲವು ಬ್ಯಾಂಕ್ ಗಳು ಉಚಿತ ಎಟಿಎಂ ವ್ಯವಹಾರದ ಮಿತಿಯನ್ನು ಮೀರಿದರೆ ಒಂದಿಷ್ಟು ಶುಲ್ಕು ವಿಧಿಸುತ್ತಿದೆ. ಇದೀಗ ಹೊಸ ವರ್ಷದಿಂದ ಹೆಚ್ಚಾಗಲಿದೆ. ಅಲ್ದೇ, ಆನ್ಲೈನ್ ಪೇಮೆಂಟ್ ಗಳ ಮೇಲೂ ಶುಲ್ಕು ವಿಧಿಸುವ ಒಂದಿಷ್ಟು ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!