ಕೇಂದ್ರದ ವಿರುದ್ಧ ಮಾತ್ನಾಡಿದ್ರೆ ಫೋನ್ ಬರುತ್ತವೆ

378

ನವದೆಹಲಿ: ಸಾರ್ವಜನಿಕ ವಲಯದಿಂದ ಕೇಳಿ ಬರುವ ಟೀಕೆಗಳನ್ನ ಸ್ವೀಕರಿಸದೆ ಹೋದ್ರೆ ಮೇಲಿಂದ ಮೇಲೆ ತಪ್ಪುಗಳು ಆಗುತ್ತವೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ ರಾಜನ್ ಹೇಳಿದ್ದಾರೆ. ಇತ್ತೀಚೆಗೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯಲ್ಲಿದ್ದ ಇಬ್ಬರನ್ನ ವಜಾಗೊಳಿಸಲಾಗಿದೆ.

ಸರ್ಕಾರದ ವಿದೇಶಿ ಹಣಕಾಸು ನೀತಿಯನ್ನ ಆ ಇಬ್ಬರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು. ಹೀಗಾಗಿ ಅವರನ್ನ ಸಮಿತಿಯಿಂದ ಹೊರಹಾಕಲಾಯ್ತು ಎಂದು ರಾಜನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಮಾತ್ನಾಡಿದ್ರೆ ಫೋನ್ ಕಾಲ್ ಗಳು ಬರುತ್ತವೆ. ಇಲ್ಲದೆ ಹೋದ್ರೆ, ಸರ್ಕಾರದ ಪರವಾಗಿರುವವರು ಟ್ರೋಲ್ ಗಳನ್ನ ಮಾಡ್ತಾರೆ ಅಂತಾ ಹೇಳಿದ್ದಾರೆ.

ಈಗಿರುವ ಆರ್ಥಿಕ ಕುಸಿತ ತುಂಬಾ ಕಳವಳಕಾರಿಕಾಯಾಗಿದೆ. ಈ ಬಗ್ಗೆ ತುರ್ತು ಸುಧಾರಣಾ ಕ್ರಮಗಳನ್ನ ತೆಗೆದುಕೊಂಡ್ರೆ, ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟದ ಬಹುದೊಡ್ಡ ಹೊಡೆತದಿಂದ ತಪ್ಪಿಸಿಕೊಳ್ಳಬಹುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!