ಇಂದು ಅನರ್ಹರ ರಾಜಕೀಯ ಭವಿಷ್ಯ

405

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನ 15 ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ 15 ಜನ ಶಾಸಕರನ್ನ ಅನರ್ಹತೆ ಮಾಡಲಾಗಿದೆ. ಇದನ್ನ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಗೆ ಹೋಗಿದ್ದು ಅದರ ವಿಚಾರಣೆ ಇಂದು ನಡೆಯಲಿದೆ.

ಈಗಾಗ್ಲೇ 15 ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಸಹ ಘೋಷಣೆ ಮಾಡಿಯಾಗಿದೆ. ಇದ್ರಿಂದಾಗಿ ಅನರ್ಹ ಶಾಸಕರ ಎದೆಯಲ್ಲಿ ಢವಢವ ಶುರುವಾಗಿದೆ. ಇವರ ಬೆನ್ನಿಗೆ ಬಿಜೆಪಿ ನಿಂತಿದೆ. ಒಂದು ವೇಳೆ ಇಂದಿನ ತೀರ್ಪು ಅನರ್ಹರ ವಿರುದ್ಧವಾಗಿ ಬಂದ್ರೆ ಮುಂದಿನ ಕಥೆ ಏನು? ಪರವಾಗಿ ಬಂದ್ರೆ ಏನು? ಮತ್ತೆ ವಿಚಾರಣೆ ಮುಂದೂಡಿದ್ರೆ ಏನು ಮಾಡಬೇಕು ಅನ್ನೋ ರಾಜಕೀಯ ಲೆಕ್ಕಾಚಾರಗಳು ನಡೆದಿವೆ.

ಅನರ್ಹ ಶಾಸಕರು ತಮ್ಮ ಮಕ್ಕಳನ್ನ, ಹೆಂಡ್ತಿಯರನ್ನ, ಅಣ್ಣ ತಮ್ಮಂದಿರನ್ನ ಚುನಾವಣೆ ಅಖಾಡಕ್ಕೆ ಬೀಡುವ ಪ್ಲಾನ್ ಮಾಡಿದ್ದಾರೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ಏನು ಆಗಲಿದೆ ಅನ್ನೋದರ ಮೇಲೆ ಒಂದಿಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಖಂಡಿತ ಇದೆ.




Leave a Reply

Your email address will not be published. Required fields are marked *

error: Content is protected !!