ಇಂದು, ನಾಳೆ ಬ್ಯಾಂಕ್ ನೌಕರರ ಮುಷ್ಕರ: 4 ದಿನ ಬ್ಯಾಂಕ್ ರಜೆ

240

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಎರಡು ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದೇಶ್ಯಾದ್ಯಂತ 9 ಲಕ್ಷಕ್ಕೂ ಅಧಿಕ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಡಿಸೆಂಬರ್ 16 ಹಾಗೂ 17ರಂದು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.

ಕೇಂದ್ರದ ನಿರ್ಧಾರ ವಿರೋಧಿಸಿ ಯುನೈಟೆಡ್ ಆಫ್ ಫೋರಂ ಬ್ಯಾಂಕ್ ಯೂನಿಯನ್ಸ್ ಈ ಮುಷ್ಕರವನ್ನು ನಡೆಸುತ್ತಿದೆ. 2021-22ರ ಬಜೆಟ್ ವೇಳೆ ಎರಡು ಬ್ಯಾಂಕ್ ಗಳ ಖಾಸಗೀಕರಣ ಪ್ರಸ್ತಾಪ ಮಾಡಲಾಗಿದೆ. ಆದರೆ, ಆ ಎರಡು ಬ್ಯಾಂಕ್ ಗಳು ಯಾವವು ಅನ್ನೋದು ಹೇಳಿಲ್ಲ. ಇದನ್ನು ವಿರೋಧಿಸಿ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದಾರೆ.

ಇಂದು ಹಾಗೂ ನಾಳೆ ಬ್ಯಾಂಕ್ ನೌಕರರ ಮುಷ್ಕರ. ಶನಿವಾರ ಹಾಗೂ ಭಾನುವಾರ ವಾರಂತ್ಯದ ಬ್ಯಾಂಕ್ ರಜೆ. ಹೀಗಾಗಿ ಗ್ರಾಹಕರಿಗೆ ಸತತ 4 ದಿನಗಳ ಕಾಲ ಬ್ಯಾಂಕ್ ಸೇವೆ ಸಿಗುವುದಿಲ್ಲ.




Leave a Reply

Your email address will not be published. Required fields are marked *

error: Content is protected !!