ಬ್ರೇಕಿಂಗ್ ನ್ಯೂಸ್
Search

ಗಾಯತ್ರಿ ಶಿಲ್ಪಿಯವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ

526

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಶಿಲ್ಪ ಕಲೆಯಲ್ಲಿ ಅಪಾರ ಸಾಧನೆ ಮಾಡಿರುವ ಗಾಯತ್ರಿ ಎ.ಶಿಲ್ಪಿ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ ಡಿಸೆಂಬರ್ 16, ಗುರುವಾರ ಬೆಳಗ್ಗೆ 11ರಿಂದ ಸಂಜೆ 5.30ರ ತನಕ ನಡೆಯಲಿದೆ. ಓಂ ನಗರ ಹತ್ತಿರ ಇರುವ ಎಂ.ಬಿ ಲೋಹಾರ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಇದರ ಜೊತೆಗೆ ಸಂಜೆ 4.30ಕ್ಕೆ ಸುಂದರ ಕಾರ್ಯಕ್ರಮ ನಡೆಯಲಿದೆ.

ಅಮೂರ್ತಕ್ಕೆ ಮೂರ್ತ ರೂಪ ಕೊಡುವ ಗಾಯಿತ್ರಿ

ಶಿಲ್ಪಕಲಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಗಾಯಿತ್ರಿ ಎ.ಶಿಲ್ಪಿ ಪ್ರತಿಮಾ ಶಿಲ್ಪ ಪ್ರಕಾರದಲ್ಲಿ ಬಿಎಫ್ಎ ಅಧ್ಯಯನ ಮಾಡಿದ್ದಾರೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇವರ ಉಳಿಪೆಟ್ಟು ತಿಂದ ಕಲ್ಲುಗಳು ಸುಂದರ ಮೂರ್ತಿಗಳಾಗಿ ಜನ್ಮ ತಾಳಿವೆ. ನೋಡುಗರ ಕಣ್ಮನ ಸೆಳೆಯುತ್ತವೆ. ಕಲ್ಲಿನ ಶಿಲೆಯ ಜೊತೆಗೆ ಲೋಹಗಳಲ್ಲಿಯೂ ಶಿಲ್ಪಗಳನ್ನು ತಯಾರಿಸುವಲ್ಲಿ ಇವರು ಎತ್ತಿದ ಕೈ.

ಇವರು ಕಲಾ ನೈಪುಣ್ಯಕ್ಕೆ 2015ರಲ್ಲಿ ಶಿಲ್ಪಕಲಾ ಅಕಾಡಮಿ ವಾರ್ಷಿಕ ಪ್ರದರ್ಶನದಲ್ಲಿ ಪ್ರಶಸ್ತಿ, 2016ರಲ್ಲಿ ಡಿವಿಜಿ ಪಂಜೆ ಪ್ರಶಸ್ತಿ, 2017ರಲ್ಲಿ ಪ್ರಸಿದ್ಧ ತಿಂಥಣಿ ಮೌನೇಶ್ವರ ದೇವಸ್ಥಾನದಿಂದ ಶಿಲ್ಪಶ್ರೀ ಬಿರುದು ಸೇರಿದಂತೆ ಹತ್ತು ಹಲವು ಸನ್ಮಾನಗಳು ಸಂದಿವೆ.




Leave a Reply

Your email address will not be published. Required fields are marked *

error: Content is protected !!