ಪ್ರಜಾಸ್ತ್ರ ಸುದ್ದಿ
ಹುಣಸೂರು: ಕೇವಲ 2 ದಿನಗಳ ಹಿದೆಯಷ್ಟೇ ಉದ್ಘಾಟನೆಗೊಂಡಿರುವ ದೇವಸ್ಥಾನವೊಂದರಲ್ಲಿ ಕಳ್ಳತನ ನಡೆದಿದೆ. ಚಿಕ್ಕ ಹುಣಸೂರು ಹಳೆಯೂರಿನ ಕೆರೆಯ ಹತ್ತಿರ ನಿರ್ಮಿಸಲಾಗಿರುವ ಬನ್ನಂತಮ್ಮ ದೇವಸ್ಥಾನ ಶುಕ್ರವಾರವಷ್ಟೇ ಉದ್ಘಾಟನೆಗೊಂಡಿದೆ. ಈಗ ನೋಡಿದರೆ ಕಳ್ಳತನ ನಡೆದಿದೆ.
ದೇವಸ್ಥಾನದ ಬಾಗಿಲು ಒಡೆದ ಕಳ್ಳರ ಹುಂಡಿಯನ್ನು ಹಣ, ದೇವರ ಮೂರ್ತಿ ಮೇಲಿನ ತಾಳಿ, ಎರಡು ಲೈಟ್ ಸಹ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಶನಿವಾರ ರಾತ್ರಿ ಈ ಕೃತ್ಯ ನಡೆಸಲಾಗಿದೆ. ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.