ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕ್ರಿಕೆಟ್ ಜಗತ್ತಿನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಕಿಂಗ್ ಕೊಹ್ಲಿ ಎಂದೇ ಖ್ಯಾತಿ ಗಳಿಸಿದ್ದಾರೆ. ಭರ್ಜರಿ ಶತಕ, ರನ್ ಗಳ ಸುರಿಮಳೆಯಿಂದ ರನ್ ಮಷಿನ್ ಎನಿಸಿಕೊಂಡಿರುವ ಕೊಹ್ಲಿಗೆ ಇಂದು 35ನೇ ವರ್ಷದ ಸಂಭ್ರಮ. ಹೀಗಾಗಿ ಅಭಿಮಾನಿಗಳು ನೆಚ್ಚಿನ ಆಟಗಾರನಿಗೆ ಶುಭ ಕೋರುತ್ತಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ರನ್ ಮಳೆ ಸುರಿಸುತ್ತಿರುವ ಕೊಹ್ಲಿ 7 ಪಂದ್ಯಗಳಿಂದ 442 ರನ್ ಗಳಸಿ 3ನೇ ಸ್ಥಾನದಲ್ಲಿದ್ದಾರೆ ನಲ್ಲಿದ್ದಾರೆ. 1 ಶತಕ, 4 ಅರ್ಧ ಶತಕ ಬಂದಿದೆ. ಲಿಟಲ್ ಮಾಸ್ಟರ್ ಸಚಿನ್ 49 ಶತಕಗಳ ದಾಖಲೆ ಸರಿಗಟ್ಟಲು 1 ಶತಕ ಬಾಕಿ ಇದ್ದು, ಇಂದು ಅದು ನೆರವೇರುತ್ತಾ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಹಿಂದಿನ ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಶತಕದ ಸಮೀಪ ಬಂದು ಔಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಾದರೂ ಶತಕ ಸಿಡಿಸುತ್ತಾರಾ ಕಾದು ನೋಡಬೇಕಿದೆ.