ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಇದೀಗ ಟ್ವೀಟರ್ ನಲ್ಲಿ ಗುಡುಗಿದ್ದಾರೆ. ನಟ ದರ್ಶನ ಪೋಸ್ಟ್ ಮಾಡಿರುವುದನ್ನ ನೋಡಿದ ಅಭಿಮಾನಿಗಳು ಡಿ ಬಾಸ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ.
ನಾನು ಐಸ್ ಕ್ಯಾಂಡಿಯಷ್ಟು ಸಿಹಿ. ನೀರಿನಷ್ಟು ತಂಪು. ಪ್ರಮಾಣಿಕತೆಯಲ್ಲಿ ಯೋಧನಷ್ಟೇ ನಿಷ್ಠೆಯನ್ನ ಹೊಂದಿದ್ದೇನೆ. ಎದುರಿಗಿದ್ದವರು ಹೇಗೆ ಇರುತ್ತಾರೋ ನಾನು ಹಾಗೇ ಇರುತ್ತೇನೆ ಅನ್ನೋ ಮಾತನ್ನ ನಟ ದರ್ಶನ ಹೇಳಿದ್ದಾರೆ. ಇಷ್ಟೊಂದು ಕಟುವಾಗಿ ಟ್ವೀಟ್ ಮಾಡಿರೋದು ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ.