ಕೂಸಿನ ಜೊತೆಗೆ ಗೊಂಬೆಗೂ ಚಿಕಿತ್ಸೆ!

369

ನವದೆಹಲಿ: ಮಕ್ಕಳಿಗೆ ಗೊಂಬೆ ಅಂದ್ರೆ ತುಂಬಾ ಇಷ್ಟವಾಗುತ್ತೆ. ಸದಾ ಅವುಗಳ ಜೊತೆ ಆಟವಾಡುತ್ತವೆ. ಹೀಗಾಗಿ ಗೊಂಬೆ ಕೊಟ್ರೆ ಏನ್ ಮಾಡಿದ್ರೂ ಸೈ ಅನ್ನುತ್ತವೆ ಅನ್ನೋದಕ್ಕೆ ಇದೊಂದು ಪ್ರಕರಣ ಸಾಕ್ಷಿಯಾಗಿದೆ ನೋಡಿ.

Image result for doll treatment in new delhi

ಝಿಕ್ರಾಳ ಅನ್ನೋ 11 ತಿಂಗಳ ಕೂಸು ಬೆಡ್ ಮೇಲಿಂದ ಬಿದ್ದು ಕಾಲಿನ ಮೂಳೆ ಮುರಿದಿತ್ತು. ಹೀಗಾಗಿ ಮಗುವನ್ನ ನವದೆಹಲಿಯ ಲೋಕನಾಯಕ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆಗ ವೈದ್ಯರು ಟ್ರಾಕ್ಷನ್ ರಾಡ್ ಮೂಲಕ ಚಿಕಿತ್ಸೆಗೆ ಮುಂದಾಗಿದ್ದಾರೆ. ಆದ್ರೆ, ಮಗು ಕೇಳಬೇಕಲ್ಲ. ಒದ್ದಾಡಿದೆ. ಆಗ ತಾಯಿ ಹೇಳಿದ ಮಾತು ಕೇಳಿದ ವೈದ್ಯರು ಗೊಂಬೆಗೆ ಚಿಕಿತ್ಸೆ ಮಾಡುವ ರೀತಿ ನಾಟಕ ಮಾಡಿದ್ದಾರೆ. ಅದನ್ನ ನೋಡಿದ ಕೂಸು ಸುಮ್ಮನೆ ಮಲಗಿದೆ.

Image result for doll treatment in new delhi

ಝಿಕ್ರಾಳಗೆ ಆಕೆಯ ಅಜ್ಜಿ ಕೊಟ್ಟ ಗೊಂಬೆ ತುಂಬಾ ಇಷ್ಟ. ಆ ಗೊಂಬೆಗೆ ಮೊದ್ಲು ಬ್ಯಾಂಡೇಜ್ ಹಾಕಿದ್ದಾರೆ. ಅದನ್ನ ನೋಡಿದ ಮಗು ತಾನು ಬ್ಯಾಂಡೇಜ್ ಹಾಕಿಸಿಕೊಂಡು ಬೆಡ್ ಮೇಲೆ ಕಾಲು ಮೇಲೆ ಮಾಡಿ ಹೀಗೆ 13 ದಿನಗಳ ಚಿಕಿತ್ಸೆ ಪಡೆದಿದೆ. ಇದು ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.

Image result for doll treatment in new delhi



Leave a Reply

Your email address will not be published. Required fields are marked *

error: Content is protected !!