ಕರ್ತವ್ಯದಲ್ಲಿ ಎಣ್ಣೆ ಪಾರ್ಟಿ, ಪೊಲೀಸರಿಬ್ಬರು ಅಮಾನತು

189

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ತುರ್ತು ಸೇವೆ ನೀಡುವ 112 ಪೆಟ್ರೋಲಿಂಗ್ ವಾಹನದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಖಡಕಲಾಟ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಊಟ ಮಾಡುವ ನೆಪದಲ್ಲಿ ವಾಹನದಲ್ಲಿಯೇ ಮದ್ಯ, ಮಾಂಸದೂಟ ಮಾಡಿದ ಪ್ರಕರಣ ನನ್ನ ಗಮನಕ್ಕೆ ಬಂದ ತಕ್ಷಣ ಶಿಸ್ತು ಕ್ರಮಕ್ಕೆ ಆದೇಶಿಸಿದ್ದೇನೆ. ಈ ಸಂಬಂಧ ದುಮಾಳ, ಎಚ್.ಎಂ ಕಮತೆ ಅನ್ನೋ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದರು.

ಪೊಲೀಸ್ ಸಿಬ್ಬಂದಿ ಮೇಲೆ ನಿಗಾ ವಹಿಸುವಲ್ಲಿ ವಿಫಲರಾದ ಚಿಕ್ಕೋಡಿ, ಖಡಕಲಾಟ್ ಪೊಲೀಸ್ ಠಾಣೆಯ ಇಬ್ಬರು ಪಿಎಸ್ಐಗಳಿಗೆ ನೋಟಿಸ್ ನೀಡಲಾಗಿದೆ. ಡಿಎಸ್ ಪಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಅಂತಾ ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!