ನ್ಯೂಜಿಲೆಂಡ್ ವಿರುದ್ಧ ಸೋತ ಭಾರತ

186

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಹ್ಯಾಮಿಲ್ಟನ್: ಸೆಡನ್ ಪಾರ್ಕ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. 261 ರನ್ ಗಳ ಟಾರ್ಗೆಟ್ ಮುಟ್ಟಲು ಆಗದೆ 62 ರನ್ ಗಳಿಂದ ಸೋತಿತು.

ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಭಾರತೀಯ ವನೀತಿಯರು 2ನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮಿಥಾಲಿ ರಾಜ್ ವಿಫಲರಾದರು. ಆ್ಯಮ್ 75, ಕೆರ್ 50, ಕೇಟ್ ಮಾರ್ಟಿನ್ 41 ರನ್ ಗಳ ಆಟಿಂದಾಗಿ 9 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತು. ಭಾರತ ಪರ ಪೂಜಾ ವಸ್ತರ್ಕರ್ 4 ವಿಕೆಟ್ ಪಡೆದು ಮಿಂಚಿದರು. ಪಾಕ್ ವಿರುದ್ಧ ಅಬ್ಬರಿಸಿದ್ದ ರಾಜೇಶ್ವರಿ ಗಾಯಕ್ವಾಡ್ 2, ಗೋಸ್ವಾಮಿ ಹಾಗೂ ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಭಾರತದಲ್ಲಿ ಹರ್ಮನ್ ಪ್ರೀತ್ ಕೌರ್ 71 ರನ್ ಗಳಿಸಿದರು. ಇವರ ಹೊರತು ಯಾರೂ ಭರ್ಜರಿ ಬ್ಯಾಟ್ ಬೀಸಲಿಲ್ಲ. ಯಾಸಿತಾ ಭಾಟಿಯಾ 28, ನಾಯಕಿ ಮಿಥಾಲಿ ರಾಜ್ 31 ರನ್ ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ 46.4 ಓವರ್ ಗಳಲ್ಲಿ 198 ರನ್ ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಲಿಯಾ ಹಾಗೂ ಆಮೇಲಿಯಾ ಕೆರ್ ತಲಾ 3 ವಿಕೆಟ್ ಪಡೆದರು. ಜೆನ್ಸನ್ 2, ಜೆಸ್, ಹೆನ್ನಾ ಒಂದೊಂದು ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!