ನಾಳೆ ‘ಅಥಿ’ ಚಿತ್ರದ ಪೋಸ್ಟರ್ ರಿಲೀಸ್

176

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಾಕಷ್ಟು ಕುತೂಹಲ ಮೂಡಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅಥಿ ಚಿತ್ರದ ಪೋಸ್ಟರ್ ಜೂನ್ 25ರಂದು ಮಧ್ಯಾಹ್ನ 2ಗಂಟೆಗೆ ರಿಲೀಸ್ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿದೆ. ಈ ಕುರಿತು ಪೋಸ್ಟರ್ ಬಿಟ್ಟಿದ್ದು, ಅದರಲ್ಲಿ ಧೈರ್ಯಶಾಲಿ ಹೆಂಡ್ತಿ ದೆವ್ವದ ಗಂಡನ ಅನಾವರಣ ಎಂದು ಬರೆಯಲಾಗಿದೆ.

ನಟ, ನಿರ್ದೇಶಕ ಲೋಕೇಂದ್ರ ಸೂರ್ಯ ಅವರೇ ಈ ಚಿತ್ರಕ್ಕೂ ಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ನಟನೆ ಸಹ ಮಾಡುತ್ತಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಸಾತ್ವಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅನಂತ್ ಆರ್ಯನ್ ಮ್ಯೂಸಿಕ್ ಇದೆ.

ರೆಡ್ ಅಂಡ್ ವೈಟ್ ಸೆವನ್ ರಾಜ್ ಈ ಚಿತ್ರಕ್ಕೆ ಬಂಡಾವಳ ಹೂಡಿದ್ದಾರೆ. ಸೂರ್ಯ ಸಿನಿ ಫ್ಯಾಕ್ಟರಿ ಅಡಿಯಲ್ಲಿ ಸೆವನ್ ರಾಜ್ ಆರ್ಟ್ಸ್ ‘ಅಥಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರದ ಕುರಿತು ಸಿನಿ ರಸಿಕರಲ್ಲಿ ಕುತೂಹಲ ಮೂಡಿದ್ದು, ಪೋಸ್ಟರ್ ಅವರ ಕುತೂಹಲ ಇನ್ನಷ್ಟು ಹೆಚ್ಚುವ ಮಾಡುವ ಸಾಧ್ಯತೆ ಇದೆ.




Leave a Reply

Your email address will not be published. Required fields are marked *

error: Content is protected !!