ಡಿ ಬಾಸ್ ಹೆಸರಲ್ಲಿ 25 ಕೋಟಿ ವಂಚನೆಗೆ ಯತ್ನ

252

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದ ಡಿ ಬಾಸ್ ನಟ ದರ್ಶನ ಅವರ ಹೆಸರಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಟ ದರ್ಶನ ಮೈಸೂರಿನ ಎಸ್ಪಿ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ನಟ ದರ್ಶನ, ನಮ್ಮದೊಂದು ಡಾಕ್ಯುಮೆಂಟ್ ಪೋರ್ಜರಿ ಆಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಾನೊಂದು ಹೇಳುವುದು ಅದು ಬೇರೆಯಾಗಿ ತಪ್ಪಾಗುವುದು ಬೇಡ. ಕಳೆದು ತಿಂಗಳು ನಡೆದ ಘಟನೆ ಸಂಬಂಧ ಮಾಹಿತಿ ನೀಡಲಾಗಿದೆ. ಪೊಲೀಸರು ಬಾಯಿ ಬಿಡಿಸುತ್ತಾರೆ. ನನಗೆ ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಎಂದರು.

ಈ ಸಂಬಂಧ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಅವರು ಸಹ ಬೆಂಗಳೂರಿನ ಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ದೇ, ದರ್ಶನ ಸ್ನೇಹಿತರು ಸಹ ಮೈಸೂರಿನ ಹೆಬ್ಬಾಳ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಲೋನ್ ಮಾಡಿ ಕೊಡುವುದಾಗಿ ಹೇಳಿ ದರ್ಶನ ಹಾಗೂ ಉಮಾಪತಿ ಅವರ ಆಸ್ತಿ ನಕಲಿ ದಾಖಲೆ ಸೃಷ್ಟಿಸಿ ಪೋರ್ಜರಿ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಬೆಂಗಳೂರು ಮೂಲದ ಮಹಿಳೆ ಅರುಣಾಕುಮಾರಿ ಅನ್ನೋ ಆರೋಪಿ, ರಾಷ್ಟ್ರೀಯ ಬ್ಯಾಂಕ್ ವೊಂದರ ಮ್ಯಾನೇಜರ್ ಎಂದು ಹೇಳಿಕೊಂಡು ಮೋಸ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ನಿಮ್ಮ ಸ್ನೇಹಿತರು 25 ಕೋಟಿ ರೂಪಾಯಿಗೆ ನಿಮ್ಮ ಹೆಸರು ಬಳಸಿಕೊಂಡು ಲೋನ್ ಪಡೆಯುತ್ತಿದ್ದಾರೆ. ಅದಕ್ಕೆ ಕೇಳಲು ಬಂದಿದ್ದೆ ಎಂದು ಹೇಳಿದ್ದಳಂತೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಯಾರೂ ಅರ್ಜಿ ಹಾಕಿಲ್ಲ ಅನ್ನೋದು ತಿಳಿದಿದೆ. ಈ ಬಗ್ಗೆ ಮಹಿಳೆಯನ್ನ ವಶಕ್ಕೆ ಪಡೆದು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!