ಸಿಇಟಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಮೇಲುಗೈ

109

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳಿಗೆ ಸಂಬಂಧಿಸದಂತೆ ನಡೆದ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ಮಲ್ಲೇಶ್ವರಂದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದರು.

ಈ ಬಾರಿಯ ಸಿಇಟಿಯಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರ್ ಕೋರ್ಸ್ ನ ಟಾಪ್ 10ರಲ್ಲಿ 8 ಬೆಂಗಳೂರು, ಧಾರವಾಡ, ಬಳ್ಳಾರಿ ಒಂದೊಂದು ಸ್ಥಾನ ಪಡೆದಿವೆ. ಯೋಗ ಹಾಗೂ ನ್ಯಾಚುರೋಪತಿ ಕೋರ್ಸಿನಲ್ಲಿ ಬೆಂಗಳೂರು 5, ಮಂಗಳೂರು 2, ಹುಬ್ಬಳ್ಳಿ 1, ದಾವಣಗೆರೆಯ ಒಬ್ಬ ವಿದ್ಯಾರ್ಥಿ ರ್ಯಾಂಕ್ ಪಡೆದಿದ್ದಾನೆ.

ಒಟ್ಟು 2 ಲಕ್ಷದ 44 ಸಾವಿರದ 345 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಇಂಜಿನಿಯರ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪತಿ, ಡಿ.ಫಾರ್ಮ್, ಬಿಎಸ್ಸಿ ನರ್ಸಿಂಗ್ ಕೋರ್ಸ್ ಗಳಿಗೆ ಈ ಪರೀಕ್ಷೆ ನಡೆದಿತ್ತು.

ಸಾಂದರ್ಭಿಕ ಚಿತ್ರ ಬಳಸಲಾಗಿದೆ…




Leave a Reply

Your email address will not be published. Required fields are marked *

error: Content is protected !!