ಕರೋನಾ ಕೆಂಡದಲ್ಲಿ ಧರ್ಮ ರಾಜಕೀಯ ಮೈ ಕಾಯಿಸಿಕೊಳ್ತಿದೆ…

969

ಪ್ರಜಾಸ್ತ್ರ ಡೆಸ್ಕ್:

ಅಜ್ಜಿಗೆ ಅರಬಿ (ಬಟ್ಟೆ) ಚಿಂತಿಯಾದ್ರೆ ಮೊಮ್ಮಗಳಿಗೆ ಮಿಂಡನ ಚಿಂತೆ ಅನ್ನೋ ನಾಣ್ನುಡಿ ಇದೆ. ಎಲ್ಲೆಡೆ ಕರೋನಾದಿಂದ ಹೇಗಪ್ಪ ಪಾರಾಗೋದು ಅಂದ್ರೆ, ಇನ್ನು ಕೆಲವರಿಗೆ ಇದರಲ್ಲಿ ಹೇಗೆ ಧರ್ಮ, ರಾಜಕೀಯದ ಚದುರಂಗದಾಟ ಆಡಬೇಕು ಅನ್ನೋ ಚಿಂತಿಯಿದೆ. ಅದಕ್ಕೆ ಸಾದಿಕ್ ನಗರ, ಪಾದಯರಾಯನಪುರದ ಘಟನೆಗಳೇ ಸಾಕ್ಷಿ.

ನಾನು ಇದ್ದರೆ ಧರ್ಮ, ನಾನು ಇದ್ದರ ದೇಶ ಅನ್ನೋದು ಮರೆತ ಕೆಲವರು ನಮಾಜ್ ಮಾಡಲು ಗುಂಪು ಗುಂಪಾಗಿ ಸೇರ್ತಾರೆ. ಮತ್ತೆ ಕೆಲವರು ಸೇವೆ ನೀಡಲು ಬಂದ ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡ್ತಾರೆ. ಇದಕ್ಕಾಗಿಯೇ ಕಾದು ಕುಳಿತ ರಾಜಕೀಯ ನಾಯಕರುಗಳು ನಾಲಿಗೆಯ ತೆವಲು ತೀರಿಸಿಕೊಂಡು ಬಿಡ್ತಾರೆ. ಅದರ ಪರಿಣಾಮ, ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ. ಯಾವಾಗ ಯಾವಾಗ ಇದಕ್ಕೆ ಪುಡಾರಿಗಳ ಗಾಳಿ ಬೀಸುತ್ತೋ ಆಗ ಉರಿಯಲು ಶುರು ಮಾಡುತ್ತೆ. ತಣ್ಣನೆಯ ಕ್ರೌರ್ಯ ಮೆರೆಯುತ್ತೆ.

ರಾಜ್ಯದಲ್ಲಿ ಹಲವು ಕಡೆ ಪದೆಪದೆ ಕೆಲ ಮುಸ್ಲಿಂರು ಮಾಡುವ ನೀಚ ಕೆಲಸಕ್ಕೆ ಇಡೀ ಸಮುದಾಯಕ್ಕೆ ಕಪ್ಪು ಚುಕ್ಕೆ. ಕರೋನಾ ಅನ್ನೋದು ಜಾತಿ, ಧರ್ಮ, ಲಿಂಗ ನೋಡಿಕೊಂಡು ಬರೋದಿಲ್ಲವೆಂದು ಗೊತ್ತಿದ್ದು ಧರ್ಮದ ಶೂಲಕ್ಕೆ ಬಲಿಯಾಗಲು ಬರ್ತಾರೆ. ರಾಜ್ಯದಲ್ಲಿ ನಡೆದ ಕೆಲವು ಪ್ರಕರಣಗಳನ್ನ ಸೂಕ್ಷ್ಮವಾಗಿ ಗಮನಿಸಿದಾಗ, ಇದು ಆ ಕ್ಷಣಕ್ಕೆ ನಡೆದಿದ್ದು ಅಲ್ಲ. ಇದರ ಹಿಂದೆ ಒಂದಿಷ್ಟು ಕಾಣದ ಕೈಗಳು ಕೆಲಸ ಮಾಡ್ತಿವೆ ಅನ್ನೋದರ ವಾಸನೆ ಬರುತ್ತೆ. ಯಾಕಂದ್ರೆ, ಕರೋನಾ ಕೆಂಡದಲ್ಲಿ ಧರ್ಮ ರಾಜಕೀಯದ ಮೈ ಕಾಯಿಸಿಕೊಳ್ಳಬೇಕಿದೆ. ಇದನ್ನ ಅರಿಯದವರ ಕೈಗೆ ಕೋಳ ಬೀಳುತ್ತಲೇ ಹೋಗುತ್ತೆ.

ಇವತ್ತಿನ ತುರ್ತು ಪರಿಸ್ಥಿತಿಯಲ್ಲಿ ಒಂದು ಸಮುದಾಯದ ಕೆಲವರಿಂದ ಪದೆಪದೆ ಇಂಥಾ ತಪ್ಪುಗಳು ನಡೆದಾಗ, ಅದೆ ಸಮುದಾಯ ಹಾಗೂ ಇತರೆ ಸಮುದಾಯದವರು ವಿರೋಧಿಸಲೇಬೇಕಾಗುತ್ತೆ. ಆಗ ಅದಕ್ಕೆ ಮತ್ತೆ ಬಣ್ಣ ಬಳೆಯಲಾಗುತ್ತೆ. ಅಲ್ಲಿಗೆ ಯಾರು ಏನು ಅಂದುಕೊಂಡಿದ್ದರೋ ಅದು ಸಕ್ಸಸ್ ಆಗುತ್ತೆ. ಬಿಜೆಪಿಯ ಹೆಗಡೆ, ಯತ್ನಾಳ ಎಷ್ಟೊಂದು ಅಪಾಯವೋ ಕಾಂಗ್ರೆಸ್ ನ ಜಮೀರ ಅಹ್ಮದನಂತವರು ಅಷ್ಟೇ ಅಪಾಯ. ಇದು ತಿಳಿಯದ ಹೊರತು ಇಂಥಾ ಘಟನೆಗಳು ನಿಲ್ಲದು…




Leave a Reply

Your email address will not be published. Required fields are marked *

error: Content is protected !!