ಮೊದಲ ಕರೋನಾ ಔಷಧ ಮಾನವ ಪ್ರಯೋಗ ಫೇಲ್

404

ಜಗತ್ತಿನ 130 ದೇಶಗಳಲ್ಲಿ ತನ್ನಾಟವನ್ನ ಆಡ್ತಿರುವ ಕರೋನಾ ವೈರಸ್ ವಿರುದ್ಧ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ವೈಜ್ಞಾನಿಕ ವಲಯದಲ್ಲಿ ಇದಕ್ಕೆ ಔಷಧಿ ಕಂಡು ಹಿಡಿಯಲು ಶತಾಯಗಥಾಯ ಪ್ರಯತ್ನ ನಡೆಸಲಾಗ್ತಿದೆ. ಇದರ ನಡುವೆ ಸಾಕಷ್ಟು ಕುತೂಹಲ ಮೂಡಿಸಿದ್ದ ಮೊದಲ ಕರೋನಾ ಔಷಧ ಮಾನವ ಪ್ರಯೋಗ ವಿಫಲವಾಗಿದೆ.

ಅಮೆರಿಕ ಮೂಲದ ಗಿಲಿಯಡ್ ಸೈನ್ಸಸ್ ಇಂಕ್ ಸಂಸ್ಥೆಯ ರೆಮ್ಡಿಸಿವಿಯರ್ ಔಷಧದ ಮಾನವ ಪ್ರಯೋಗ ಫೇಲ್ ಆಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ಸೈಟ್ ನಲ್ಲಿ ಸುದ್ದಿ ಓಡಾಡುತ್ತಿದೆ. ಇದರ ಬಗ್ಗೆ ಫೈನಾನ್ಶಿಯಲ್ ಟೈಮ್ ನಲ್ಲಿ ವರದಿಯಾಗಿದೆ.

ಫೈನಾನ್ಶಿಯಲ್ ಟೈಮ್ ವರದಿ ಪ್ರಕಾರ, 237 ಮಂದಿಯನ್ನ ಪ್ರಯೋಗಕ್ಕೆ ಬಳಸಲಾಗಿದೆ. 158 ಮಂದಿಯನ್ನ ಡ್ರಗ್ ಹಾಗೂ 79 ಮಂದಿಯನ್ನ ಕಂಟ್ರೋಲ್ ಗ್ರೂಪ್ ಎಂದು ಮಾಡಲಾಗಿತ್ತು. ಇವರಲ್ಲಿ ಔಷಧಿ ನೀಡುತ್ತದಂತೆಯೇ ಅಡ್ಡಪರಿಣಾಮಗಳು ಕಂಡು ಬಂದಿವೆ. ಹೀಗಾಗಿ ತಕ್ಷಣ ಔಷಧಿ ನೀಡುವುದು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!