ಬಿಸಿಲಿಗೆ ಕರೋನಾ ಸರ್ವನಾಶ: ಸಂಶೋಧನೆ ಬಿಚ್ಚಿಟ್ಟ ರಹಸ್ಯ

606

ವಾಷಿಂಗ್ಟನ್: ಡೆಡ್ಲಿ ಕರೋನಾ ವಿಶ್ವವ್ಯಾಪಿಯಾಗಿ ವ್ಯಾಪಿಸಿಕೊಂಡಿದೆ. ಇದರ ಹೊಡೆತಕ್ಕೆ ಮರಣಮೃದಂಗ ಮುಂದುವರೆದಿದೆ. ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕ ನಲುಗಿ ಹೋಗಿದೆ. ಇಲ್ಲಿ 8 ಲಕ್ಷದ 60 ಸಾವಿರ ಪ್ರಕರಣಗಳು ದಾಖಲಾಗಿದ್ರೆ, ಬರೋಬ್ಬರಿ 49 ಸಾವಿರದ 759 ಜನ ಸಾವನ್ನಪ್ಪಿದ್ದಾರೆ.

ಅಮೆರಿಕದ ಕೆಲ ಸಂಶೋಧನೆಗಳ ಪ್ರಕಾರ, ಬಿಸಿಲಿನ ತಾಪಮಾನದಲ್ಲಿ ಕರೋನಾ ವೈರಸ್ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆಯಂತೆ. ಹೋಮ್ ಲ್ಯಾಂಡ್ ಸೆಕ್ಯುರಿಟಿ, ಕರೋನಾ ಭಿನ್ನ ಉಷ್ಣಾಂಶ, ವಾತಾವರಣ ಹಾಗೂ ಮೇಲ್ಮೈ ಪ್ರದೇಶಗಳ ಅಧ್ಯಯನದ ಪ್ರಕಾರ ಬಿಸಿ ವಾತಾರಣದಲ್ಲಿ ಕರೋನಾ ಸಾಯುತ್ತವೆ. ಒಣ ಪ್ರದೇಶ ಅಥವ ಕಡಿಮೆ ಉಷ್ಣಾಂಶವಿರುವ ಸ್ಥಳಗಳಲ್ಲಿ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.

https://twitter.com/dhsscitech/status/1253474938012516353?s=20

ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ದೇಶನಾಲಯದ ಮುಖ್ಯಸ್ಥರಾದ ಬಿಲ್ ಬ್ರಿಯಾನ್ ಸಂಶೋಧನೆ ಪ್ರಕಾರ, ಸೂರ್ಯನ ಕಿರಣಗಳು ಹಾಗೂ ತೇವಾಂಶವಿರುವ ಜಾಗದಲ್ಲಿ ಬಹುಬೇಗ ಸಾವನ್ನಪ್ಪುತ್ತವೆ. ಹೀಗಾಗಿ ಸೂರ್ಯನ ಬೆಳಕಿನಲ್ಲಿ ವೈರಸ್ ಸಾಯುತ್ತವೆ. ಐಸೋಪ್ರೊಪೈಲ್ ಅಲ್ಕೋಹಾಲ್ 30 ಸೆಕೆಂಡ್ ಗಳಲ್ಲಿ ವೈರಸ್ ಮುಕ್ತ ಮಾಡುತ್ತದೆಯಂತೆ. ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಅಧ್ಯಯನ ಇನ್ನು ಆರಂಭದ ಹಂತದಲ್ಲಿದೆ ಎಂದು ಬಿಲ್ ಬ್ರಿಯಾನ್ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!