ಲಾಕ್ ಡೌನ್ ಕಟ್ಟಕಡೆಯ ಆಯ್ಕೆ ಆಗಿರಲಿ: ಪ್ರಧಾನಿ

245

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ಜೊತೆಗೆ ದೇಶದ ಜನತೆ ಹೋರಾಟ ನಡೆಸಿದ್ದಾರೆ. ಇದರ ನಡುವೆ 2ನೇ ಬಿರುಗಾಳಿ ಬಂದಿದೆ. ಹೀಗಾಗಿ ಮತ್ತೊಮ್ಮೆ ಹೋರಾಟ ಮಾಡಬೇಕಾಗಿದೆ. ನಿಮ್ಮ ತಾಳ್ಮೆ, ಧೈರ್ಯ, ಆತ್ಮಸ್ಥೈರ್ಯ ತುಂಬಾ ಮುಖ್ಯವಾಗಿದೆ. ವೈದ್ಯರು, ನರ್ಸ್, ಪೌರಕಾರ್ಮಿಕರು, ಆಂಬ್ಯುಲೆನ್ಸ್ ಡ್ರೈವರ್ಸ್, ಪೊಲೀಸರು ಹೋರಾಟ ನಡೆಸಿದ್ದಾರೆ. ಅವರನ್ನ ಸ್ಮರಸಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ದೇಶವನ್ನುದ್ದೇಶಿಸಿ ಮಾತ್ನಾಡಿದ ಅವರು, ಕಠಿಣ ಸಂದರ್ಭದಲ್ಲಿ ಧೈರ್ಯ ಬಿಡಬಾರದು. ಆಮ್ಲಜನಕ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತೆ. 1 ಲಕ್ಷ ಸಿಲಿಂಡರ್ ಖರೀದಿಸಲಾಗಿದೆ. ಆಕ್ಷಿಜನ್ ಬೇಡಿಕೆ ಹೆಚ್ಚಾಗಿದ್ದು, ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದೆ ಎಂದರು. ಫಾರ್ಮ್ ಕಂಪನಿಯ ಔಷಧಿ ಉತ್ಪದನಾ ಹೆಚ್ಚಿಸಲಾಗಿದೆ. ಆಕ್ಸಿಜನ್ ಪ್ಲಾಂಟ್ ರೆಡಿ ಮಾಡಲಾಗ್ತಿದೆ. ಕೋವಿಡ್ ಆಸ್ಪತ್ರೆ ನಿರ್ಮಿಸಲಾಗ್ತಿದೆ. ಇದ್ರಿಂದಾಗಿ ಔಷಧಿ ಉತ್ಪದನಾ ವೇಗ ಹೆಚ್ಚಿಸಲಾಗ್ತಿದೆ. ಇದನ್ನ ದೇಶದ ಪ್ರತಿ ರಾಜ್ಯಕ್ಕೂ ತಲುಪಿಸಲಾಗುವುದು ಎಂದಿದ್ದಾರೆ.

ವಿಶ್ವದಲ್ಲಿ ಅತಿ ವೇಗವಾಗಿ 10, 11 ಹಾಗೂ 12 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕರೋನಾ ವಾರಿಯರ್ಸ್ ಗಳಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಬಡವರು, ಮಧ್ಯಮ ವರ್ಗದವರು ಸೇರಿ ಎಲ್ಲರಿಗೂ ಲಸಿಕೆ ಸಿಗಲಿದೆ. ಮೇ 1ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗಲಿದೆ.

ಹಿಂದಿನಕ್ಕಿಂತ 2020 ವಿಭಿನ್ನವಾಗಿದೆ. ದೇಶದಲ್ಲಿ ದೊಡ್ಡ ಲ್ಯಾಬ್ ನೆಟ್ ವರ್ಕ್ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಸಿಗಲಿದೆ. ಜನರು ಹೆಚ್ಚೆಚ್ಚು ಲಸಿಕೆ ಪಡೆದುಕೊಳ್ಳಬೇಕು. ಲಾಕ್ ಡೌನ್ ಅವಶ್ಯಕತೆಯಿಲ್ಲ. ಇದನ್ನು ಹೊರತುಪಡಿಸಿ ಏನು ಮಾಡಬೇಕು ಅನ್ನೋದು ರಾಜ್ಯ ಸರ್ಕಾರ ಯೋಚಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಹೀಗಾಗಿ ಲಾಕ್ ಡೌನ್ ಕಟ್ಟಕಡೆಯ ಆಯ್ಕೆಯಾಗಿರಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!