ಬ್ರೇಕಿಂಗ್ ನ್ಯೂಸ್
Search

ಕುಂದಾನಗರಿಯಲ್ಲಿ 7 ಕರೋನಾ: ಸಚಿವ ಜಾರಕಿಹೊಳಿ ಸಭೆ

278

ಅಥಣಿ: ಬೆಳಗಾವಿ ಜಿಲ್ಲೆಯಲ್ಲಿ ಏಳು ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳ ಸಭೆ ನಡೆಸಿದ್ರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಥಣಿ ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ವೈದ್ಯಕೀಯ, ಪೊಲೀಸ್ ಮತ್ತು ಪೌರಾಡಳಿತ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಬೆಳಗಾವಿ ಆಸ್ಪತ್ರೆಯಲ್ಲಿ ಕರೋನಾ ರೋಗಿಯ ಡ್ಯಾನ್ಸ್ ಕುರಿತು ಮಾತನಾಡಿ, ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತ ಖುಷಿಯಿಂದ ಕುಣಿದಿದ್ದಾನೆ ಅದಕ್ಕೆ ಬೇರೆ ಅರ್ಥಕಲ್ಪಿಸಬೇಕಿಲ್ಲ ಎಂದರು. ಜಿಲ್ಲೆಯ ಉಸ್ತುವಾರಿ ನೋಡಲು ಜಗದೀಶ ಶೆಟ್ಟರ್ ಬರಬೇಕು ಅಂತೇನೂ ಇಲ್ಲ. ಕರೋನಾ ಎಲ್ಲೆಡೆ ಹಬ್ಬಿತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಶಾಸಕ, ಸಚಿವರು ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇವೆ ಎಂದರು.

ಈ ವೇಳೆ ಅಥಣಿ ಶಾಸಕ ಮಹೇಶ ಕುಮಠಳ್ಳಿ, ತಾಲೂಕು ಪಂಚಾಯ್ತಿ ಅಧಿಕಾರಿ ರವಿ ಬಂಗಾರಪ್ಪನವರ, ಸಿಪಿಐ ಶಂಕರಗೌಡ ಬಸನಗೌಡರ,  ಆಹಾರ ಇಲಾಖೆಯ ಎಂ ವಿ ಬಿರಾದಾರ, ಉಪ ತಹಶಿಲ್ದಾರ ಆರ್ ಆರ್ ಬುರ್ಲಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿ ಎಸ್ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳಾದ ವೀರಣ್ಣ ವಾಲಿ, ಜಿ ಡಿ ಗುಂಡ್ಲೂರ, ತಮ್ಮಣ್ಣ ಕಲಾಟೆ, ಎಂ ಎಮ್ ಮಿರ್ಜಿ ಸೇರಿದಂತೆ ಹಲವರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!