ರಾಜ್ಯದಲ್ಲಿ ಒಂದೇ ದಿನ 918 ಜನರಲ್ಲಿ ಕೋವಿಡ್ 19 ಸೋಂಕು

373

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಹೆಲ್ತ್ ಬುಲೆಟಿನ್ ಬಂದಿದ್ದು, ಇಂದು ದಾಖಲೆ ಪ್ರಮಾಣದ ಸೋಂಕು ಪತ್ತೆಯಾಗಿವೆ. ಬರೋಬ್ಬರಿ 918 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ 11,923ಕ್ಕೆ ಏರಿಕೆಯಾಗಿದೆ. ಈ ಮೂಲಕ ಈ ಹಿಂದಿನ ದಾಖಲೆಗಳಲ್ಲ ಮುರಿದು ಹೋಗಿವೆ. ಇದ್ರಿಂದಾಗಿ ರಾಜ್ಯದಲ್ಲಿ ಆತಂಕ ಶುರುವಾಗಿದೆ.

ಇಂದು 371 ಜನ ಬಿಡುಗಡೆಯಾಗುವ ಮೂಲಕ ಇದುವರೆಗೂ 7,287 ಜನರು ಡಿಸ್ಚಾರ್ಜ್ ಆಗಿದ್ದಾರೆ. ಅಲ್ದೇ, 11 ಜನ ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ 3, ಬೀದರ 3, ಗದಗ 1, ಕಲಬುರಗಿ 2, ಬಳ್ಳಾರಿ 1, ಧಾರವಾಡ 1 ಸಾವು ಪ್ರಕರಣ ದಾಖಲಾಗಿದೆ.

ಜಿಲ್ಲಾವಾರು ಸೋಂಕಿತರ ಲಿಸ್ಟ್ ಇಲ್ಲಿದೆ..

ಬೆಂಗಳೂರು ನಗರ 596, ದಕ್ಷಿಣ ಕನ್ನಡ 49, ಕಲಬುರಗಿ 33, ಬಳ್ಳಾರಿ 24, ಗದಗ 24, ಧಾರವಾಡ 19, ಬೀದರ 17, ಉಡುಪಿ 14, ಹಾಸನ 14, ಕೋಲಾರ 14, ಯಾದಗಿರಿ 13, ತುಮಕೂರು 13, ಶಿವಮೊಗ್ಗ 13, ಚಾಮರಾಜನಗರ 13, ಮಂಡ್ಯ 12, ಮೈಸೂರು 12, ಕೊಡಗು 9, ರಾಯಚೂರು 6, ದಾವಣಗೆರೆ 6, ಬೆಂಗಳೂರು ಗ್ರಾಮಾಂತರ 5, ಬಾಗಲಕೋಟೆ 2,  ಉತ್ತರ ಕನ್ನಡ 2, ಚಿಕ್ಕಮಗಳೂರು 2, ಚಿತ್ರದುರ್ಗ 2,  ಬೆಳಗಾವಿ 1, ಚಿಕ್ಕಬಳ್ಳಾಪುರ 1, ಕೊಪ್ಪಳ 1 ಹಾಗೂ ಹಾವೇರಿಯಲ್ಲಿ 1 ಸೋಂಕು ಪ್ರಕರಣ ಪತ್ತೆಯಾಗಿದೆ.

ಇನ್ನು ಮುಂದೆಯಾದ್ರೂ ಜನರು ಎಚ್ಚರಿಕೆಯಿಂದ ಇರಬೇಕು. ಸರ್ಕಾರ ಬಹುತೇಕವಾಗಿ ಕೈಚೆಲ್ಲಿದೆ. ನಿಮ್ಮ ಜೀವದ ಮೇಲೆ ನಿಮ್ಗೆ ಆಸೆ ಇದ್ರೆ ಎಚ್ಚರಿಕೆಯಿಂದ ಇರಿ. ಇಲ್ಲದೆ ಹೋದ್ರೆ ಕರೋನಾ ಸೋಂಕಿಗೆ ತುತ್ತಾಗಬೇಕಾಗುತ್ತೆ.




Leave a Reply

Your email address will not be published. Required fields are marked *

error: Content is protected !!