ಕೋವಿಡ್ ಮುಂಜಾಗ್ರತಾ ಕಾರ್ಯಕ್ರಮ

284

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕರ್ನಾಟಕ ವಿಜ್ಞಾನ ಕಾಲೇಜು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಕೊವಿಡ್ -19 ಮುಂಜಾಗ್ರತೆಗಾಗಿ ಕರೋನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೆ.ಸಿ.ಡಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ಕಾಲೇಜಿನ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತದೆ ಎಂದು ರೆಡ್ಡ್ ಕ್ರಾಸ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.

ಈ ವೇಳೆ ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರುಗಳಾದ ಡಾ.ಕೆ.ಡಿ.ಹಾವೇರಿಪೇಟ, ರವಿಕುಮಾರ ಮಾಳಿಗೇರ, ಡಾ.ಶಾಂತನಗೌಡ ಜಕ್ಕನಗೌಡರ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ.ಶಿವಾನಂದ ಚೌಗಲಾ, ಕರ್ನಾಟಕ ವಿಜ್ಞಾನ ಕಾಲೇಜಿನ ರೆಡ್ ಕ್ರಾಸ್ ನ ಚೇರಮನ್ ಡಾ.ಎಸ್.ಜಿ.ಹಿರೇಮಠ, ಸದಸ್ಯ ಮಹಾಂತೇಶ ವೀರಾಪೂರ, ರೆಡ್‌ ಕ್ರಾಸ್‌ನ ಖಜಾಂಚಿ ಡಾ ಪವಾಡ ಶೆಟ್ಟರ್ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!