ಕೋವಿಡ್ 19: ಜಿಲ್ಲೆಯಲ್ಲಿ 3ನೇ ಸ್ಥಾನದಲ್ಲಿ ಸಿಂದಗಿ

447

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿಯೂ ಕೋವಿಡ್ 19 ಸೋಂಕಿತರ ಸಂಖ್ಯೆ ಏರಿಕೆ ಪ್ರಮಾಣದಲ್ಲಿದೆ. ಗುಣಮುಖರಾಗ್ತಿರುವವರ ಸಂಖ್ಯೆ ವೇಗವಾಗಿಯಿದ್ರೂ, ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಇದುವರೆಗೂ 1,758 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 1,193 ಜನರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇನ್ನು 542 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 23 ಜನ ಕರೋನಾ ವೈರಾಣುವಿಗೆ ಬಲಿಯಾಗಿದ್ದಾರೆ. ಇನ್ನು ತಾಲೂಕುವಾರು ಎಲ್ಲಿ ಎಷ್ಟು ಸೋಂಕಿತ ಪ್ರಕರಣಗಳು ದಾಖಲಾಗಿವೆ ಅನ್ನೋದು ನೋಡುವುದಾದ್ರೆ 12 ತಾಲೂಕುಗಳಲ್ಲಿ ವಿಜಯಪುರ ನಗರ ಹೊರತು ಪಡಿಸಿ, ಬಸವನ ಬಾಗೇವಾಡಿ, ತಾಳಿಕೋಟಿ ಹಾಗೂ ಸಿಂದಗಿ ಟಾಪ್ 3ರಲ್ಲಿ ಕಾಣಿಸಿಕೊಂಡಿವೆ.

ವಿಜಯಪುರ ನಗರದಲ್ಲಿ 1,221 ಪ್ರಕರಣಗಳು ಕಾಣಿಸಿಕೊಂಡಿವೆ. ಉಳಿದಂತೆ ಬಸವನ ಬಾಗೇವಾಡಿ 138, ತಾಳಿಕೋಟಿ 71, ಸಿಂದಗಿ 70, ಇಂಡಿ 59, ಮುದ್ದೇಬಿಹಾಳ 59, ತಿಕೋಟ 36, ದೇವರಹಿಪ್ಪರಗಿ 35, ನಿಡಗುಂದಿ 23, ಬಬಲೇಶ್ವರ 22, ಚಡಚಣ 16 ಹಾಗೂ ಕೊಲ್ಹಾರದಲ್ಲಿ 8 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಒಟ್ಟಾರೆ ಜಿಲ್ಲೆಯಲ್ಲಿ ಜುಲೈ 21ರ ಹೆಲ್ತ್ ಬುಲೆಟಿನ್ ಪ್ರಕಾರ 1,758 ಜನರಲ್ಲಿ ಸೋಂಕು ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!