ದರ್ಶನ್ ಹೊಸ ಸಿನಿಮಾ ಕಾಟೇರ

118

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಚಿತ್ರದ ಟೈಟಲ್ ಅನೌನ್ಸ್ ಮಾಡಲಾಗಿದೆ. ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಹೊಸ ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದು, ‘ಕಾಟೇರ’ ಎಂದು ಹೆಸರು ಇಡಲಾಗಿದೆ. ಜೊತೆಗೆ ರಗಡ್ ಲುಕ್ ನಲ್ಲಿರುವ ಪೋಸ್ಟರ್ ಸಹ ರಿವೀಲ್ ಮಾಡಲಾಗಿದೆ.

46ನೇ ವಸಂತಕ್ಕೆ ಕಾಲಿಟ್ಟಿರುವ ನೆಚ್ಚಿನ ನಟನಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸೇರಿ ಎಲ್ಲರೂ ಶುಭ ಕೋರುತ್ತಿದ್ದಾರೆ. 70ರ ದಶಕದ ಕಥೆಯನ್ನು ಇಲ್ಲಿ ಹೇಳಲಾಗುತ್ತಿದೆ. ನಿರ್ದೇಶಕರಾದ ಜಡೇಶ್ ಹಂಪಿ, ತರುಣ್ ಸುಧೀರ್ ಕಥೆ ರೆಡಿ ಮಾಡಿದ್ದಾರೆ. ಮಾಸ್ತಿ ಖಡಕ್ ಸಂಭಾಷಣೆ ಇದೆ.

ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿರುವ ಮತ್ತೊಂದು ಮಾಸ್ ಚಿತ್ರದಲ್ಲಿ ದರ್ಶನಗೆ ಜೋಡಿಯಾಗಿ ಹಿರಿಯ ನಟಿ ಮಾಲಶ್ರೀ ಅವರ ಪುತ್ರಿ ರಾಧನಾ ರಾಮ್ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಮ್ಯೂಸಿಕ್ ಇದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ದರ್ಶನ್ ಮತ್ತೊಂದು ಮಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರಿಗೆ ಬರಬಹುದು.




Leave a Reply

Your email address will not be published. Required fields are marked *

error: Content is protected !!