ಜೀವ ಉಳಿಸಿದ ಧಾರವಾಡದ ಬಸ್ ಚಾಲಕ

394

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಸ್ತೆಯಲ್ಲಿರುವ ಶ್ರೀನಗರ ರೈಲ್ವೆ ಗೇಟಿನಲ್ಲಿ ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲೇ ಬಸ್ ಚಾಲಕ ಶಬ್ಬೀರ್ ಅಹ್ಮದ್ ಮತ್ತಿವಲೇ, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿ 40 ಪ್ರಯಾಣಿಕರ ಜೀವ ಉಳಿಸಿದ್ದಾನೆ.

ಗುರುವಾರ (ಜ. 10) ಬೆಳಿಗ್ಗೆ ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಸ್ ಹೊರಟಿತ್ತು. ರೈಲ್ವೆ ಗೇಟ್ ಬಂದಾಗ, ರೈಲು ಬರುವಿಕೆ ಬಗ್ಗೆ ಯಾವುದೇ ಮುನ್ಸೂಚನೆಯನ್ನೂ ಕೊಟ್ಟಿರಲಿಲ್ಲ. ಹೀಗಾಗಿ ಚಾಲಕ ತನ್ನ ಪಾಡಿಗೆ ಕಾರು ಚಲಾಯಿಸಿಕೊಂಡು ಹೊರಟಿದ್ದ.

ಅದೇ ವೇಳೆಯೇ ವೇಗವಾಗಿ ರೈಲು ಬಂದಿತ್ತು. ಅದನ್ನು ಗಮನಿಸಿದ ಚಾಲಕ, 5 ಸೆಕೆಂಡ್‌ನಲ್ಲೇ ಹಳಿ ಮೇಲಿದ್ದ ಬಸ್ಸನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ದೊಡ್ಡ ಅವಘಡವನ್ನು ತಪ್ಪಿಸಿದ್ದಾನೆ.

ರೈಲ್ವೆ ಗೇಟಿನ ಗೇಟ್‍ಮ್ಯಾನ್ ಅಜಾರೂಕತೆಯಿಂದ ಈ ಘಟನೆ ನಡೆದಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ.
ಆ ಸಂಬಂಧ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿರುವ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜು ಹೊಂಗಲದ ಹಾಗೂ ಸಮಾಜಸೇವಕ ಬಸವರಾಜ ಗೋಕಾವಿ,  ‘ಧಾರವಾಡ ರೈಲ್ವೆ ಇಲಾಖೆಯ ಸ್ಟೇಷನ್ ಮಾಸ್ಟರ್ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ’ ಎಂದು ಆರೋಪಿಸಿದ್ದಾರೆ.

ಜೊತೆಗೆ, ಅವರಿಬ್ಬರು ತಮ್ಮ ಸ್ನೇಹಿತರ ಜೊತೆಗೂಡಿ ಚಾಲಕ ಶಬ್ಬೀರ್ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಶಬ್ಬೀರ್ ಕೆಲಸಕ್ಕೆ ಇಡೀ ಧಾರವಾಡ ಜನತೆಯೇ ಅಭಿನಂದನೆ ಸಲ್ಲಿಸುತ್ತಿದೆ.


TAG


Leave a Reply

Your email address will not be published. Required fields are marked *

error: Content is protected !!