ಸೈಕಲೇ “ಪುಸ್ತಕ ಮಾರಾಟದ ಮಳಿಗೆ”!

686

ಧಾರವಾಡದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಜ. 4, 5 ಹಾಗೂ 6ರಂದು ಜರುಗಿದ ಸಮ್ಮೇಳನದಲ್ಲಿ ಹಲವು ಸಾಧಕರು, ಸಾಹಿತಿಗಳ ಪರಿಚಯ ಕನ್ನಡ ಅಭಿಮಾನಿಗಳಿಗೆ ಆಗಿದೆ.

ಅವರಲ್ಲಿ ಹುಬ್ಬಳ್ಳಿಯ ಶಾಂತಿನಿಕೇತನ ಬಡಾವಣೆಯ ನಿವಾಸಿ ಬಸವರಾಜ ಗೋಕಾವಿ ಸಹ ಒಬ್ಬರು.  ತಮ್ಮ ಸೈಕಲ್‌ನ್ನೇ ಪುಸ್ತಕ ಮಳಿಗೆಯನ್ನಾಗಿ ಮಾಡಿಕೊಂಡು ಸಮ್ಮೇಳನದಲ್ಲೆಲ್ಲ ಸುತ್ತಾಡಿ, ಪುಸ್ತಕಗಳನ್ನು ಮಾರಾಟ ಮಾಡಿದ್ದಾರೆ. ಆ ಮೂಲಕ ತಮ್ಮ ಕನ್ನಡದ ಪ್ರೀತಿಯನ್ನು ತೋರಿಸಿದ್ದಾರೆ.

ಎಲೆ ಮರೆಯಕಾಯಿಯಂತೆ ಸಾಹಿತ್ಯ ಕೃಷಿ ಮಾಡುತ್ತಿರುವ ಧಾರವಾಡ ಸರಳ ಸಜ್ಜನ ಕವಿ ಡಾ.ವಿ.ಸಿ.ಐರಸಂಗ ಅವರ ಕವಿತೆಗಳ ಪುಸ್ತಕಗಳನ್ನು, ಆ ಸಾಹಿತಿಯ ಮಾದರಿಯಲ್ಲಿಯೇ ಸೈಕಲ್‌ ಮೇಲೆ ಸಂಚರಿಸುತ್ತ ಮಾರಿದ್ದಾರೆ. ಈ ಬಸವರಾಜ್ ಗೋಕಾವಿ, ಕರ್ನಾಟಕ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಹ ಹೌದು.

ಸಮ್ಮೇಳನದಲ್ಲಿ ಐರಸಂಗ ಅವರ ಕವಿತೆಗಳನ್ನು ಸೈಕನಲ್ಲಿಟ್ಟುಕೊಂಡು ಡಾ. ಐರಸಂಗ ಅವರ ”ಸಂಚಾರಿ ಪುಸ್ತಕ ಮೇಳ” ಎಂಬ ಹಣೆಬರಹ ಅಡಿಯಲ್ಲಿಯೇ 200ಕ್ಕೂ ಅಧಿಕ ಪುಸ್ತಕಗಳನ್ನು ಮಾರಾಟ ಮಾಡಿದರು. ಅನೇಕರು ಡಾ. ಐರಸಂಗ ಅವರ ಅಭಿಮಾನಿಗಳು ಅವರ ಕವಿತೆಗಳ ಬಗ್ಗೆ ಮಾಹಿತಿ ಪಡೆದರು.

ಕವಿ ಡಾ.ವಿ.ಸಿ.ಐರಸಂಗ ಅವರು ಪುಸ್ತಕ ಖರೀದಿಸಿ ಓದುಗರಿಗೆ ಧನ್ಯವಾದ ಅರ್ಪಿಸಬೇಕು ಎಂಬ ಅಭಿಪ್ರಾಯವನ್ನು ಬಸವರಾಜ ಗೋಕಾವಿ ಬಳಿ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪುಸ್ತಕ ಖರೀದಿಸಿದ ಅವರ ಅಭಿಮಾನಿಗಳ ಫೋನ್‌ ನಂಬರ್‌ನ್ನು ಸಹ ಬಸವರಾಜ ಅವರು ಸಂಗ್ರಹಿಸಿದರು.




Leave a Reply

Your email address will not be published. Required fields are marked *

error: Content is protected !!