ಡಬಲ್ ಮರ್ಡರ್ ಆರೋಪಿಗಳು ಅರೆಸ್ಟ್

340

ಬೆಂಗಳೂರು: ಆಗಸ್ಟ್ 25ರಂದು ನಡೆದಿದ್ದ ಡಬಲ್ ಮರ್ಡರ್ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ದಕ್ಷಿಣ ವಿಭಾಗದ ಪೊಲೀಸ್ರು ಬಂಧಿಸಿದ್ದಾರೆ. 37 ವರ್ಷದ ಮಧುಸೂದನ ಅಲಿಯಾಸ್ ಮಲಿಯಾಳಿ ಮಧು ಹಾಗೂ 26 ವರ್ಷದ ಲಿಖನ ಅಲಿಯಾಸ್ ಲಿಖನ ಬೋಪಣ್ಣ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನುಳಿದ ನಾಲ್ಕು ಜನ ಆರೋಪಿಗಳಿಗಾಗಿ ಪೊಲೀಸ್ರು ಅಖಾಡಕ್ಕೆ ಇಳಿದಿದ್ದಾರೆ.

ಆರೋಪಿಗಳು ಕುಖ್ಯಾತ ರೌಡಿ ಟ್ಯಾಬ್ಲೆಟ್ ರಘುವಿನ ಸಹಚರರಾಗಿದ್ದಾರೆ. ಡಬಲ್ ಮರ್ಡರ್ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸ್ರು, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯ್ತಕರಾದ ಡಾ.ರೋಹಿಣಿ ಸೆಪಟ್ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಪೊಲೀಸ್ ಆಯುಕ್ತ ಮಹಾದೇವ ನೇತೃತ್ವದಲ್ಲಿ ಠಾಣೆ ಪಿಎಸ್ಐ ಮಧು.ಕೆ ಹಾಗೂ ಅವರ ಸಿಬ್ಬಂದಿ ಇಬ್ಬರು ಆರೋಪಿಗಳನ್ನ ಶೀಘ್ರವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!