ಗುಮ್ಮಟನಗರಿಯಲ್ಲಿ ಡಬಲ್ ಮರ್ಡರ್

416

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಪತ್ನಿ ಹಾಗೂ ಅತ್ತೆಯನ್ನು ಹತ್ಯೆ ಮಾಡಿದ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ರೂಪಾ ಮೇತ್ರಿ(32), ಆಕೆಯ ತಾಯಿ ಕಲ್ಲವ್ವ(55) ಕೊಲೆಯಾದ ದುರ್ದೈವಿಗಳು. ರೂಪಾ ಪತಿ ಮಲ್ಲಿಕಾರ್ಜುನ್ ಮೇತ್ರಿ ಕೊಲೆ ಆರೋಪಿ.

ನವಭಾಗ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. ಇಲ್ಲಿಗೆ ಬಂದು ನೆಲೆಸಿ 6 ತಿಂಗಳಾಗಿತ್ತು. ಮೂವರು ಮಕ್ಕಳು, ಪತ್ನಿ ಹಾಗೂ ಅತ್ತೆಯೊಂದಿಗೆ ವಾಸವಾಗಿದ್ದ. ಮೃತ ರೂಪಾ ಮೇತ್ರಿ ಮಹಿಳಾ ಮತ್ತು ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಳು. ಹೀಗಾಗಿ ಮನೆಯ ಕೆಲಸದ ಕಡೆ ಹೆಚ್ಚು ಗಮನ ಹರಿಸುತ್ತಿರಲಿಲ್ಲವೆಂದು ಕೊಲೆ ಮಾಡಿದ್ದಾನೆಂದು ಹೇಳಲಾಗುತ್ತಿದೆ.

ಕೊಲೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸ್ಥಳಕ್ಕೆ ಗಾಂಧಿ ಚೌಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!