ಭೂಕಂಪನ ರೆಕಾರ್ಡ್ ಆಗಿಲ್ಲವೆಂದ ಅಧಿಕಾರಿ

639

ಸಿಂದಗಿ/ಬೆಂಗಳೂರು: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಹಾಗೂ ಕಲಬುರಗಿ, ರಾಯಚೂರು ಭಾಗದಲ್ಲಿ ಭೂಕಂಪನವಾಗಿದೆ ಅನ್ನೋ ಆತಂಕ ಬೆಳಗ್ಗೆಯಿಂದ ಮೂಡಿದೆ. ಭಾರೀ ಸ್ಫೋಟ ಕೇಳಿಸಿದೆ ಅಂತಾ ಕೆಲವರು ಹೇಳಿದ್ರೆ, ಭೂಮಿ ಕಂಪಿಸಿದ ಅನುಭವ ಆಗಿದೆ ಅಂತಾ ಇನ್ನು ಕೆಲವರು ಹೇಳಿದ್ದಾರೆ. ಆದ್ರೆ, ಭೂಕಂಪನ ಆಗಿಲ್ಲ ಅಂತಿದ್ದಾರೆ ಅಧಿಕಾರಿಗಳು.

ಈ ಬಗ್ಗೆ ಮಾತ್ನಾಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವೈಜ್ಞಾನಿಕ ವಿಭಾಗದ ಅಧಿಕಾರಿ ಅಭಿನಯ ಅವರು ಸ್ಪಷ್ಟಿಕರಣ ನೀಡಿದ್ದಾರೆ. ಭೂಕಂಪನ ರೀತಿ ಯಾವುದೇ ಕಂಪನ ಉಂಟಾಗಿಲ್ಲ. ಸೌಂಡ್ ಅನ್ನೋ ರೀತಿಯಲ್ಲಿ ಆಗುವುದಿಲ್ಲ. ಭೂಮಿ ಅಳುಗಾಡಿವಿಕೆಯ ಅನುಭವ ಆಗುತ್ತೆ. ಮಳೆ ಹೆಚ್ಚಿಗೆ ಬೀಳುವ ಭಾಗದಲ್ಲಿ ಈ ರೀತಿಯ ಸೌಂಡ್ ಇರುತ್ತೆ. ಆದ್ರೆ, ಅದು ಆಲಮಟ್ಟಿ, ಕಲಬುರಗಿ, ರಾಯಚೂರು, ಬೆಂಗಳೂರು ಭೂಕಂಪ ಮಾಪನ ಕೇಂದ್ರಗಳಲ್ಲಿ ಯಾವುದೇ ಕಂಪನದ ರೆಕಾರ್ಡ್ ಆಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!