ಸಿಗದ ಆಂಬುಲೆನ್ಸ್: ಬೈಕ್ ನಲ್ಲಿ ಮಗಳ ಮೃತದೇಹ ಹೊತ್ತೊಯ್ದ ತಂದೆ

179

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್: ದೇಶದಲ್ಲಿ ಆರೋಗ್ಯ ಸೇವೆ ಎಷ್ಟೊಂದು ಸಮಸ್ಯೆಯಿದೆ ಎಂದರೆ, ಜೀವ ಉಳಿಸಬೇಕಾದರೆ ಜೀವ ತೆಗೆಯುತ್ತಿದ್ದಾರೆ. ಇನ್ನೊಂದು ಕಡೆ ಮೃತದೇಹ ಸಾಗಿಸಲು ಆಂಬುಲೆನ್ಸ್ ಸಿಗದೆ ಬೈಕ್ ಮೇಲೆ ತೆಗೆದುಕೊಂಡು ಹೋಗುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಬಡತನ. ಜಾತಿ ತಾರತಮ್ಯ.

3 ವರ್ಷದ ಮಗಳ ಮೃತದೇಹ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ನೀಡಲು ಆಸ್ಪತ್ರೆಯವರು ನಿರಾಕರಿಸಿದ ಪರಿಣಾಮ ಬುಡಕಟ್ಟು ಸಮುದಾಯದ ವೆಟ್ಟಿ ಮಲ್ಲಯ್ಯ ಎಂಬುವರು ಬೈಕ್ ನಲ್ಲಿ 65 ಕಿಲೋ ಮೀಟರ್ ವರೆಗೂ ತೆಗೆದುಕೊಂಡು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಖಮ್ಮಂ ಜಿಲ್ಲೆ ಏಣುಕೂರು ಮಂಡಲದ ಕೋಟಾ ಮೇಡಪಲ್ಲಿ ಗ್ರಾಮದ ಬುಡಕಟ್ಟು ಸಮುದಾಯದ ವೆಟ್ಟಿ ಮಲ್ಲಯ್ಯ ಅವರ 3 ವರ್ಷದ ವೆಟ್ಟಿ ಸುಕ್ಕಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಏಣುಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಿತಿ ಗಂಭೀರವಾದ ಮೇಲೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಮೃತದೇಹ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ಕೇಳಿದರೆ ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಬಡವರಿಗಾಗಿಯೇ ಉಚಿತ ಸೇವೆ ನೀಡಬೇಕಾದ ಆಸ್ಪತ್ರೆಯವರೆ ಮೃಗೀಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಗ್ರಾಮದ ಸಂಬಂಧಿಯೊಬ್ಬರ ಬೈಕ್ ಮೇಲೆ ಮಗುವಿನ ಮೃತದೇಹ ತೆಗೆದುಕೊಂಡು ಹೋಗಲಿದೆ.

ಇತ್ತೀಚೆಗೆ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ಅಮಾನವೀಯ ನಡೆಯಿಂದ ತಾಯಿ, ಎರಡು ಹಸುಕೂಸುಗಳು ಮೃತಪಟ್ಟ ದಾರುಣ ಘಟನೆ ಕಣ್ಣು ಮುಂದೆ ಇದೆ.




Leave a Reply

Your email address will not be published. Required fields are marked *

error: Content is protected !!