ಕಾರು ಡಿಕ್ಕಿ ಪಾದಚಾರಿ ಸಾವು

622

ಅಥಣಿ: ಅಥಣಿಯಿಂದ ಸಂಕೋನಟ್ಟಿ ಗ್ರಾಮಕ್ಕೆ ಹೋಗುತ್ತಿದ್ದ ಪಾದಚಾರಿಗೆ ಅಪರಿಚಿತ ಕಾರೊಂದು ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೆ ಸಾವಿಗಿಡಾದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನ 50 ವರ್ಷದ ಲಕ್ಕಪ್ಪ ಬೀರಪ್ಪಾ ಬಾಡಗಿ ಎಂದು ಗುರುತಿಸಲಾಗಿದೆ.

ಸಂಕೋನಟ್ಟಿಗೆ ನಡೆದುಕೊಂಡು ಹೋಗ್ತಿದ್ದಾಗ ಅಪರಿಚಿತ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಕಾರ್ ಸವಾರ ನಿಲ್ಲದೆ ಪರಾರಿಯಾಗಿದ್ದಾನೆ. ಮೃತನಿಗೆ ಪತ್ನಿ, ಓರ್ವ ಮಗನಿದ್ದಾನೆ. ವಿಷಯ ತಿಳಿದ ಅಥಣಿ ಸಿಪಿಐ ಶಂಕರಗೌಡ ಬಸನಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನ ಪರೀಕ್ಷೆಗೆ ತೆಗದುಕೊಂಡು ಹೋಗಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!