ಡಿಸಿಎಂ ತವರು ಕ್ಷೇತ್ರದಲ್ಲಿ ಆಹಾರಧಾನ್ಯ ವಿತರಣೆ

879

ಅಥಣಿ: ದೇಶಾದ್ಯಂತ ಮಹಾಮಾರಿ ಕರೋನಾ ಸೋಂಕು ಹರಡದಂತೆ ಲಾಕ್ ಡೌನ್ ಆದೇಶ ಘೋಷಣೆಯಾಗಿದೆ. ದಿನದಿಂದ ಇಂದಿನವರಗೆ ಕರೋನಾ ವಿರುದ್ಧ ಹಗಲಿರುಳು ತಮ್ಮ ಜೀವನ ಲೆಕ್ಕಿಸದೆ ಹೋರಾಡುತ್ತಿರುವ ಪೊಲೀಸ್ ಇಲಾಖೆ, ಪುರಸಭೆ ಸಿಬ್ಬಂದಿ, ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು, ಪತ್ರಕರ್ತರಿಗೆ ಡಿಸಿಎಂ ಲಕ್ಷ್ಮಣ ಸವದಿ ಸಕಲ ರೀತಿಯ ವ್ಯವಸ್ಥೆ ಮಾಡಲಾಗ್ತಿದೆ.

ಅಥಣಿ ಕ್ಷೇತ್ರದವರಾದ ರಾಜ್ಯ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರ ಅನುಪಸ್ಥಿತಿಯಲ್ಲಿ ಆಹಾರಧಾನ್ಯ ಮತ್ತು ಮಾಸ್ಕ್ ಅನ್ನ ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿಯವರು ವಿತರಿಸಿದರು. ಈ ವೇಳೆ ಮಾತ್ನಾಡಿದ ಅವರು, ಜಾಗತಿಕ ಮಹಾಮಾರಿ ಕರೋನಾ ವೈರಸ್‌ ಮಾನವನನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಹಲವಾರು ಬಡ ಕುಟುಂಬಗಳಿಗೆ ಸಂದಿಗ್ದ ಸ್ಥಿತಿ ನಿರ್ಮಾಣವಾಗಿದ್ದರಿಂದ ಕಳೆದ ವಾರದಿಂದ ತಾಲೂಕಿನ ಪ್ರತಿ ವಾರ್ಡಿನ  ಕಡು ಬಡ ಕುಟುಂಬಗಳಿಗೆ ಗೋಧಿ ಮತ್ತು ಜೋಳವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಚಿದಾನಂದ ಸವದಿ, ನ್ಯಾಯವಾದಿ ಸುಶೀಲಕುಮಾರ ಪತ್ತಾರ, ಸಿಪಿಐ ಶಂಕರಗೌಡ ಬಸನಗೌಡ, ಶಿವರುದ್ರ ಘೂಳಪ್ಪನ್ನವರ, ವಿಜಯ ಮಂಗಸೂಳಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ವಿವಿಧ ಇಲಾಖೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.




Leave a Reply

Your email address will not be published. Required fields are marked *

error: Content is protected !!