ಚಂದನವನಕ್ಕೆ ‘ದೊಡ್ಮನೆ’ಯ ಇನ್ನೊಂದು ಕುಡಿ ಎಂಟ್ರಿ

428

ಇಂದು ವರನಟ ಡಾ.ರಾಜಕುಮಾರ 92ನೇ ಹುಟ್ಟು ಹಬ್ಬ. ಈ ಹೊತ್ತಿನಲ್ಲಿ ದೊಡ್ಮನೆ ಕುಟುಂಬದಿಂದ ಮತ್ತೊಂದು ಕುಡಿ ಎಂಟ್ರಿಯಾಗಿದೆ. ಅದು ಮತ್ಯಾರೂ ಅಲ್ಲ. ರಾಘವೇಂದ್ರರಾಜಕುಮಾರ ಅವರ ಎರಡನೇ ಮಗ ಎಂಟ್ರಿಯಾಗಿದೆ.

ರಾಘವೇಂದ್ರರಾಜಕುಮಾರ ಅವರ ಎರಡನೇ ಪುತ್ರ ಯುವರಾಜಕುಮಾರ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ವೈಆರ್ 1 ಅನ್ನೋ ವಿಚಿತ್ರ ಟೈಟಲ್ ನೊಂದಿಗೆ ಎಂಟ್ರಿಯಾಗಿದೆ. ಪುನೀತ ರುದ್ರನಾಗ ನಿರ್ದೇಶನದಲ್ಲಿ ಈ ಮೂವಿ ಮೂಡಿ ಬರ್ತಿದೆ.

ಅಣ್ಣಾವ್ರ ಹುಟ್ಟು ಹಬ್ಬದ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಡಿಫರೆಂಟ್ ಲುಕ್ ನಲ್ಲಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅಣ್ಣನ ಮಗನಿಗೆ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!