ಹೊಸ ಅವತಾರದಲ್ಲಿ ‘ದಾರಿ ತಪ್ಪಿದ ಮಗ’ ಬರ್ತಿದ್ದಾನೆ

529

ಡಾ.ರಾಜಕುಮಾರ ಅಭಿನಯದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಮರು ಪ್ರದರ್ಶನಗೊಂಡಿವೆ. ಇದೀಗ ಆ ಸಾಲಿಗೆ ಮತ್ತೊಂದು ಸಿನ್ಮಾ ಸೇರಿಕೊಳ್ಳುತ್ತಿದೆ. ಅದುವೇ ‘ದಾರಿ ತಪ್ಪಿದ ಮಗ’.

ಡಾ.ರಾಜಕುಮಾರ ಅವರ ಸಿನ್ಮಾಗಳು ಬದುಕಿಗೆ ಮಾರ್ಗದರ್ಶನ ನೀಡುತ್ತವೆ. ಅವುಗಳಲ್ಲಿ 1975ರಲ್ಲಿ ರಿಲೀಸ್ ಆದ ದಾರಿ ತಪ್ಪಿದ ಮಗ ಸಿನಿಮಾ ಸಹ ಒಂದು. ಈ ಚಿತ್ರ ಮತ್ತೆ ರಿಲೀಸ್ ಆಗ್ತಿದೆ. ಅದು ಹೊಸ ಅವತಾರದಲ್ಲಿ. ಸಿನಿಸ್ಕೋಪ್ 7.1 ಡಿಟಿಎಸ್ 2 ತಂತ್ರಜ್ಞಾನ ಅಳವಡಿಸಲಾಗಿದೆ. ಕೆಸಿಎನ್ ಚಂದ್ರಶೇಖರ ಅವರು ಸಿನ್ಮಾ ರೀ ರಿಲೀಸ್ ಮಾಡ್ತಿದ್ದಾರೆ.

ಪೇಕೇಟಿ ಶಿವರಾಮ ನಿರ್ದೇಶನದ ಚಿತ್ರವನ್ನ ಮುನಿರಾಜ ಚಿತ್ರ ನಿರ್ಮಾಣ ಸಂಸ್ಥೆ ಜಯಪ್ರಭ ಪ್ರೊಡೆಕ್ಷನ್ ವಿತರಣೆ ಮಾಡ್ತಿದೆ. ರಾಜಕುಮಾರಗೆ ಜೋಡಿಯಾಗಿ ಮಂಜುಳ, ಕಲ್ಪನಾ ಕಾಣಿಸಿಕೊಂಡಿದ್ದಾರೆ. ಎಂ.ವಿ ರಾಜಮ್ಮ, ಕೆ.ಎಸ್ ಅಶ್ವಥ, ವಜ್ರಮುನಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ನವೆಂಬರ್ 22ಕ್ಕೆ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!