ವಾಹನ ಕಾಯ್ದೆ ತಿದ್ದುಪಡಿಗೆ ವಿರೋಧ

403

ಸಿಂದಗಿ: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿದೇಕವನ್ನ ಕೇಂದ್ರ ಸರ್ಕಾರ ಮಂಡಿಸಿದೆ. ಕೇಂದ್ರದ ಈ ನೀತಿ ವಿರೋಧಿಸಿ ಶ್ರೀ ಬಸವೇಶ್ವರ ಲಘು ವಾಹನ ಮಾಲೀಕರ ಮತ್ತು ಚಾಲಕರ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ ನಡೆಸಿತು. ಸಿಂದಗಿ ನಗರದ ಅಂಬೇಡ್ಕರ್ ಸರ್ಕಲ್ ನಿಂದ ಶುರು ಮಾಡಿದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸ್ತು. ಈ ವೇಳೆ ಕೇಂದ್ರದ ವಿರುದ್ಧ ಘೋಷಣೆ ಕೂಗಲಾಯ್ತು.

ಈ ನೀತಿಯಿಂದ ವಾಹನ ಮಾಲೀಕರು ಮತ್ತು ಚಾಲಕರಿಗೆ ದೊಡ್ಡ ಹೊಡೆತ. ಕೂಡಲೇ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿದೇಯಕ ಮಂಡನೆ ಹಿಂದಕ್ಕೆ ಪಡೆಯಬೇಕೆಂದು ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ವಿದೇಕದಲ್ಲಿ ಏನಿದೆ?

ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ವಾಹನದ ಮಾಲೀಕರು ಅಥವ ವಿಮೆದಾರರಿಂದ ಗರಿಷ್ಠ 5 ಲಕ್ಷ ಪರಿಹಾರ ನೀಡಬೇಕು. ಒಂದು ವೇಳೆ ಗಂಭೀರವಾಗಿ ಗಾಯಗೊಂಡವರಿಗೆ, ಅಪಘಾತ ಮಾಡಿದವರೆ 2.5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಬೇಕು.




Leave a Reply

Your email address will not be published. Required fields are marked *

error: Content is protected !!