ಫಾಜಿಲ್ ಹತ್ಯೆಗೆ ಬಳಸಿದ್ದ ಕಾರು ಪತ್ತೆ!

242

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಸುರತ್ಕಲ್ ನಲ್ಲಿ ಫಾಜಿಲ್ ಅನ್ನೋ ಯುವಕನ ಹತ್ಯೆ ವೇಳೆ ಬಳಸಿದ್ದ ಕಾರು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಕಾರನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಹುಂಡೈ ಕಂಪನಿಯ ಇಯಾನ್ ಬಿಳಿ ಬಣ್ಣದ ಕಾರು ಉಕ್ಕಡ ಎಂಬಲ್ಲಿ ನಿಂತುಕೊಂಡಿದೆ. ಸ್ಥಳೀಯರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿದಿದ್ದಾರೆ. ಫಾಜಿಲ್ ಹತ್ಯೆಯ ವೇಳೆ ಬಳಸಿದ್ದ ಕಾರು ಇದೇನಾ ಅನ್ನೋದರ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!