ಚುನಾವಣೋತ್ತರ ಸಮೀಕ್ಷೆ

248

ಪ್ರಜಾಸ್ತ್ರ ಸುದ್ದಿ

ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಮಿಜೋರಾಂ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ವಿವಿಧ ಸಂಸ್ಥೆಗಳು ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಮೇಲುಗೈ ಆಗಿದೆ.

ಮಧ್ಯಪ್ರದೇಶ, ಛತ್ತೀಸಗಡ, ತೆಲಂಗಾಣದಲ್ಲಿ ಕಾಂಗ್ರೆಸ್ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ನವೆಂಬರ್ 7 ರಂದು ಛತ್ತೀಸಗಡದ 90, ಮಿಜೋರಾಂನ 40 ಸ್ಥಾನ, ನವೆಂಬರ್ 17ರಂದು ಮಧ್ಯಪ್ರದೇಶದ 230 ಕ್ಷೇತ್ರ, ನವೆಂಬರ್ 25ರಂದು ರಾಜಸ್ಥಾನದ 200 ಸ್ಥಾನಗಳಲ್ಲಿ 199 ಕ್ಷೇತ್ರಗಳಿಗೆ ಮತದಾನ ಹಾಗೂ ತೆಲಂಗಾಣದ 119 ಕ್ಷೇತ್ರಗಳಿಗೆ ನವೆಂಬರ್ 30ರಂದು ಮತದಾನ ನಡೆದಿದೆ.

ಇದೀಗ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದೆ. ಛತ್ತೀಸಗಡದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ತೆಲಂಗಾಣದಲ್ಲಿ ಕೈ ಮುನ್ನಡೆ ಸಾಧಿಸಲಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬಹುಮತ ಎನ್ನಲಾಗುತ್ತಿದೆ. ರಾಜಸ್ಥಾನದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆಯಂತೆ. ಮಿಜೋರಾದಲ್ಲಿ ಪ್ರಾದೇಶಿಕ ಮಿಜೋ ನ್ಯಾಷನಲ್ ಫ್ರೆಂಟ್ ಹಾಗೂ ಕಾಂಗ್ರೆಸ್ ನಡುವೆ ಫೈಟ್ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!