ಗ್ಯಾರೆಂಟಿಗಳು ಹಾಗೂ ವಿಪಕ್ಷಗಳ ರಂಪಾಟ

111

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚುನಾವಣೆಪೂರ್ವದಲ್ಲಿ ಕಾಂಗ್ರೆಸ್ 5 ಗ್ಯಾರೆಂಟಿಗಳನ್ನು ಘೋಷಣೆ ಮಾಡಿತು. ಆ ವೇಳೆ ಗ್ಯಾರೆಂಟಿಗಳು ಸಂಪೂರ್ಣ ಉಚಿತವೆಂದು ಹೇಳಿದೆ. ಈಗ ಷರತ್ತುಗಳನ್ನು ವಿಧಿಸುತ್ತಿರುವುದು ಎಷ್ಟೊಂದು ಸರಿ ಎಂದು ವಿಪಕ್ಷಗಳು ಪ್ರತಿಭಟನೆ ನಡೆಸಿವೆ.

ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತವೆಂದು, ಈಗ ವಾರ್ಷಿಕ ಸರಾಸರಿ ಆಧಾರದ ಮೇಲೆ ಅನ್ನೋದು, ಕೇವಲ ಸಾಮಾನ್ಯ ಬಸ್ಸಗಳಲ್ಲಿ ಉಚಿತ ಪ್ರಯಾಣ, ಮನೆ ಒಡತಿಗೆ 2 ಸಾವಿರ ಎಂದಿದ್ದು, ಅತ್ತಿ, ಸೊಸೆ ನಡುವೆ ಜಗಳ ಹಚ್ಚುವ ಕೆಲಸ ಮಾಡಲಾಗುತ್ತಿದೆ ಅಂತೆಲ್ಲ ರಂಪಾಟ ಶುರು ಮಾಡಿವೆ. ಇದರಿಂದಾಗಿ ಜನರಲ್ಲಿ ಮತ್ತಷ್ಟು ಗೊಂದಲ ಮೂಡುತ್ತಿದೆ.

ಇನ್ನು ಟಿವಿ ಮಾಧ್ಯಮಗಳು ಗ್ಯಾರೆಂಟಿ ಬಗ್ಗೆ ಜನರಲ್ಲಿ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಮತ್ತಷ್ಟು ಗೊಂದಲದ ಪರಿಸ್ಥಿತಿ ನಿರ್ಮಿಸುತ್ತಿವೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ. 2 ಸಾವಿರ ರೂಪಾಯಿಗಾಗಿ ಅತ್ತೆ, ಸೊಸೆ ಮಧ್ಯ ಜಗಳ ನಡೆದಿದೆ ಅನ್ನೋದು, ಉಚಿತ ಬಸ್ ಪ್ರಯಾಣ ಎಲ್ಲ ಬಸ್ ಗಳಿಗೆ ಕೊಡಿ ಎನ್ನುವ ಅಭಿಪ್ರಾಯ ಸೃಷ್ಟಿಸುವುದು, ಪುರುಷರು ಏನು ಮಾಡಿದ್ದಾರೆ? ಅವರು ಮತ ಹಾಕಿಲ್ಲವಾ? ಅವರಿಗೆ ಯಾವುದೇ ಉಚಿತ ಭಾಗ್ಯಗಳು ಇಲ್ಲವಾ ಎಂದು ಕೇಳುವುದು. 2022-2023ರಲ್ಲಿ ಪಾಸಾದವರು ಮಾತ್ರ ನಿರುದ್ಯೋಗಿಗಳಾ, ಇದಕ್ಕೂ ಹಿಂದೆ ಪಾಸ್ ಆಗಿ ಕೆಲಸಕ್ಕೆ ಅಲೆದಾಡುತ್ತಿರುವವರಿಗೆ ಗೌರವಧನ ಕೊಡಬೇಕಲ್ವಾ ಹೀಗೆ ಜನರ ಅಭಿಪ್ರಾಯ ಸಂಗ್ರಹದ ನೆಪದಲ್ಲಿ ಸಾರ್ವಜನಿಕರಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಒಂದು ವರ್ಗದವರು ಕಿಡಿ ಕಾರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!