ಶಾಸಕ ಎಂ.ಪಿ ರೇಣುಕಾಚಾರ್ಯ ಕಾರ್ಯಕ್ಕೆ ಜನತೆ ಮೆಚ್ಚುಗೆ

261

ಪ್ರಜಾಸ್ತ್ರ ಸುದ್ದಿ

ಹೊನ್ನಳ್ಳಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು, ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಉತ್ತಮವಾಗಿ ಸ್ಪಂದಿಸ್ತಿದ್ದಾರೆ. ಹೀಗಾಗಿ ಹೊನ್ನಳಿ ಮತಕ್ಷೇತ್ರದ ಜನತೆ ಖುಷಿಯಾಗಿದ್ದಾರೆ.

ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊಡಿಸುವುದಾಗಿರಬಹುದು, ವೆಂಟಿಲೇಟರ್, ಮೆಡಿಕಲ್ ಕಿಟ್, ಲಸಿಕೆ, ಕೋವಿಡ್ ಕೇಂದ್ರಕ್ಕೆ ಬೇಕಾಗಿರುವ ಸೌಲಭ್ಯಗಳನ್ನ ಕೊಡಿಸುವುದು ಸೇರಿದಂತೆ ಸಾಕಷ್ಟು ಜನಪರ ಕೆಲಸಗಳನ್ನ ಮಾಡಿಕೊಂಡು ಬರ್ತಿದ್ದಾರೆ.

ಇನ್ನು ಜನರಿಗೆ ಊಟ, ಉಪಹಾರದ ವ್ಯವಸ್ಥೆ ಸಹ ಮಾಡ್ತಿದ್ದು, ಅದರಲ್ಲಿ ಸ್ವತಃ ತಾವು ದುಡಿಯುವ ಮೂಲಕ ಜನರಿಗೆ ಹತ್ತಿರವಾಗ್ತಿದ್ದಾರೆ. ನಿತ್ಯ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟವನ್ನ ಬಡವರಿಗೆ, ರೋಗಿಗಳಿಗೆ, ನಿರ್ಗತಿಕರಿಗೆ, ಕರೋನಾ ಫ್ರೆಂಟ್ ಲೈನ್ ವಾರಿಯರ್ಸ್ ಗಳಿಗೆ ನೀಡ್ತಾ ಬರ್ತಿದ್ದಾರೆ.

ಇನ್ನು ತಮ್ಮ ಕ್ಷೇತ್ರದ ಹಳ್ಳಿ ಹಳ್ಳಿಗೂ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸ್ತಿದ್ದಾರೆ. ಲಸಿಕೆ ತೆಗೆದುಕೊಳ್ಳಲು ಹೇಳ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸುವ ಮೂಲಕ ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ವಿಚಾರಿಸುವ ಮೂಲಕ ಅವುಗಳನ್ನ ಬಗೆಹರಿಸುವ ಕೆಲಸ ಮಾಡ್ತಿದ್ದಾರೆ. ರಾಜಕೀಯ ಬದುಕಿನಲ್ಲಿ ಹಲವು ಯಡವಟ್ಟುಗಳನ್ನ ಮಾಡಿಕೊಂಡು ಜನರ ಕೆಂಗಣ್ಣಿಗೂ ಗುರಿಯಾಗಿದ್ರು. ಇದೀಗ ಕಷ್ಟದ ಕಾಲದಲ್ಲಿ ಜನರಿಗೆ ಒಂದಿಷ್ಟು ಸಹಾಯ ಮಾಡ್ತಿರುವುದು ನಿಜಕ್ಕೂ ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!