ಹಬ್ಬದ ಅಡುಗೆ ಮಾಡದ ಪತ್ನಿ ಕೊಂದ ಪತಿ ಬಿಡುಗಡೆಯಾಗಿದ್ದು ಹೇಗೆ?

177

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಬ್ಬದಂದು ಅಡುಗೆ ಮಾಡದೆ, ಮಕ್ಕಳಿಗೆ ಊಟ ಹಾಕದೆ ಇರುವ ಕಾರಣಕ್ಕೆ ಪತ್ನಿ ಕೊಂದ ಪತಿಯನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ. ಕಳೆದ 6 ವರ್ಷಕ್ಕೂ ಹೆಚ್ಚು ಕಾಲ ಜೈಲಿನಿಂದ ಪತಿಗೆ ಇದೀಗ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಜೀವಾವಧಿ ಶಿಕ್ಷೆಯ ಅಪರಾಧಿಗೆ ಬಿಡುಗಡೆಯಾಗಿದ್ದು ಹೇಗೆ ಗೊತ್ತಾ?

ಚಿಕ್ಕಮಗಳೂರು ಜಿಲ್ಲೆ ಮೂಡಗೆರೆಯ ಸುರೇಶ್, ಮೊದಲ ಪತ್ನಿ ಮೀನಾಕ್ಷಿಯಿಂದ ದೂರವಾಗಿ ವಿಧುವೆ ರಾಧಾಳನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. 2016ರ ಗಣೇಶ ಹಬ್ಬದ ಸಂದರ್ಭದಲ್ಲಿ ಪತ್ನಿ ರಾಧಾ ಹಬ್ಬ ಆಚರಿಸದೆ ಹಬ್ಬದ ಅಡುಗೆ ಮಾಡದೆ ಮಕ್ಕಳಿಗೂ ಊಟ ಕೊಡದೆ ಕುಡಿದು ಮಲಗಿದ್ದಳು. ಇದರಿಂದ ಕೋಪಗೊಂಡ ಸುರೇಶ್ ದೊಣ್ಣೆಯಿಂದ ಹೊಡೆದಿದ್ದ. ಹೀಗಾಗಿ ರಾಧಾ ಮೃತಪಟ್ಟಿದ್ದಳು.

2017ರಲ್ಲಿ ವಿಚಾರಣಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸುರೇಶ್ ಮೇಲ್ಮನವಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಂತರ, ನ್ಯಾ.ಕೆ.ಸೋಮಶೇಖರ್, ನ್ಯಾ.ಟಿ.ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯಪೀಠ ಇದು ಉದ್ದೇಶಪೂರ್ವಕವಲ್ಲ ಕೊಲೆ. ಪತಿ ಆವೇಶದಿಂದ ಹೊಡೆದಿದ್ದಾನೆ. ಉದ್ದೋಶಪೂರ್ವಕವಾಗಿ ಕೊಲೆ ಮಾಡಿದ್ದಲ್ಲ. ಹೀಗಾಗಿ ಇದನ್ನು ಕೊಲೆ ಎಂದು ಪರಿಗಣಿಸದೆ ಉದ್ದೇಶಪೂರ್ವಕವಲ್ಲ ನರಹತ್ಯೆ ಎನ್ನಬಹುದು ಎಂದು ಹೇಳಿದೆ. ಈಗಾಗ್ಲೇ ಆತ 6 ವರ್ಷಕ್ಕೂ ಹೆಚ್ಚು ಕಾಲು ಜೈಲು ಶಿಕ್ಷೆ ಅನುಭವಿಸಿದ್ದಾನೆ. ಆತನ ಮೇಲೆ ಬೇರೆ ಯಾವುದೇ ಪ್ರಕರಣಗಳು ಇಲ್ಲದಿದ್ದರೆ ಬಿಡುಗಡೆ ಮಾಡಿ ಎಂದು ಆದೇಶಿಸಿದೆ.




Leave a Reply

Your email address will not be published. Required fields are marked *

error: Content is protected !!