ಹೀನಾಯವಾಗಿ ಸೋತ ಟೀಂ ಇಂಡಿಯಾ

134

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದೆ. ವೈಎಸ್ ರಾಜ್ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ 10 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮಿಚಲ್ ಸ್ಟ್ರಾಕ್ ಹಾಗೂ ಸೇನ್ ಅಬ್ಬಟ್ ಮಾರಕ ಬೌಲಿಂಗ್ ದಾಳಿಗೆ ಭಾರತ ಆಟಗಾರರು ಪೆವಿಲಿಯನ್ ಹಾದಿ ಹಿಡಿದರು. ಹೀಗಾಗಿ 26 ಓವರ್ ಗಳಲ್ಲಿ ಕೇವಲ 117 ರನ್ ಗಳಿಗೆ ಆಲೌಟ್ ಆಯಿತು. ಸ್ಟ್ರಾಕ್ 5 ವಿಕೆಟ್, ಸೇನ್ 3 ವಿಕೆಟ್ ಪಡೆದು ಮಿಂಚಿದರು. ಇಲ್ಸ್ 2 ವಿಕೆಟ್ ಪಡೆದ.

ಟೀಂ ಇಂಡಿಯಾ 31 ರನ್ ಗಳಿಸಿ ವಿರಾಟ್ ಕೊಹ್ಲಿ ರನ್ ಗರಿಷ್ಠ ಸ್ಕೋರ್ ಆಗಿದೆ. 29 ರನ್ ಗಳಿಸಿದ ಅಕ್ಷರ್ ಪಟೇಲ್ 2ನೇ ಗರಿಷ್ಠ ಸ್ಕೋರ್. ಉಳಿದಂತೆ ಎಲ್ಲರೂ ಹೀಗೆ ಬಂದು ಹಾಗೆ ಹೋದರು. 118 ರನ್ ಗುರಿಯನ್ನು ಕೇವಲ 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಹೆಡ್ ಅಜೇಯ 51, ಮಾರ್ಸ್ ಅಜೇಯ 66 ರನ್ ಗಳಿಸಿದರು.




Leave a Reply

Your email address will not be published. Required fields are marked *

error: Content is protected !!