ಇಶಾನ್ ಡಬಲ್ ಸಂಚುರಿ.. ಕೊಹ್ಲಿ 44ನೇ ಶತಕ

159

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬಾಂಗ್ಲಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಇಶಾನ್ ಕಿಶನ್ ಹಾಗೂ ಕೊಹ್ಲಿ ರನ್ ಮಳೆ ಹರಿಸಿದ್ದಾರೆ. ಕೇವಲ 131 ಬೌಲ್ ಗಳಲ್ಲಿ 10 ಸಿಕ್ಸ್, 24 ಫೋರ್ ಗಳೊಂದಿಗೆ ಬರೋಬ್ಬರಿ 210 ರನ್ ಗಳನ್ನು ಇಶಾನ್ ಸಿಡಿಸಿದ್ದಾರೆ. ಮೊಲಕ ಮೊದಲ ಡಬಲ್ ಸಂಚುರಿ ಬಾರಿಸಿ ದಾಖಲೆ ಬರೆದಿದ್ದಾರೆ.

ಸಚಿನ್ ತಂಡೂಲ್ಕರ್, ವೀರೇಂದ್ರ್ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಬಳಿಕ ದ್ವಿಶತಕ ಸಿಡಿದ 4ನೇ ಭಾರತೀಯ ಆಟಗಾರನಾಗಿ ಕಿಶಾನ್ ಕಿಶನ್ ದಾಖಲೆ ಬರೆದರು. ಐಪಿಎಲ್ ನಲ್ಲಿ ಅಬ್ಬರಿಸುವ ಇಶಾನ್, ಇಂದು ಬಾಂಗ್ಲಾ ಬೌಲರ್ ಗಳನ್ನು ಬೆಂಡೆತ್ತಿದರು.

ಇನ್ನು ಮತ್ತೊಂದು ತುದಿಯಲ್ಲಿದ್ದ ಕಿಂಗ್ ಕೊಹ್ಲಿ, 91 ಬೌಲ್ ಗಳಲ್ಲಿ 113 ರನ್ ಬಾರಿಸುವ ಮೂಲಕ 44ನೇ ಶತಕ ದಾಖಲಿಸಿದರು. ಈ ಜೋಡಿಯ ಆಟದಿಂದಾಗಿ 42 ಓವರ್ ಗಳಲ್ಲಿ ಭಾರತ 350 ರನ್ ದಾಟಿತು. ಶ್ರೇಯಸ್ 3, ನಾಯಕ ಕೆ.ಎಲ್ ರಾಹುಲ್ 8 ರನ್ ಗಳಿಸಿ ಔಟ್ ಆದರು. ಸಧ್ಯ 42.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದೆ. ಸುಂದರ್, ಅಕ್ಷರ್ ಪಟೇಲ್ ಕ್ರಿಸ್ ನಲ್ಲಿದ್ದಾರೆ.

ಫೋಟೋ ಕೃಪೆ: ಬಿಸಿಸಿಐ ಟ್ವೀಟರ್




Leave a Reply

Your email address will not be published. Required fields are marked *

error: Content is protected !!