ಮಾಂಡೌಸ್ ಚಂಡಮಾರುತಕ್ಕೆ ನಲುಗಿದ ತಮಿಳುನಾಡು

244

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಮಾಂಡೌಸ್ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಚೆನ್ನೈ ಮತ್ತು ಚೆಂಗಲಪಟ್ಟು ಜಿಲ್ಲೆಯ ಹಲವು ಕಡೆ ಜಲಾವೃತಗೊಂಡಿವೆ. ಇದರಿಂದಾಗಿ ನಾಲ್ವರು ಜೀವ ಕಳೆದುಕೊಂಡಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.

ಎಗ್ಮೋರ್ ನಲ್ಲಿ ಬೃಹತ್ ಮರ ಬಿದ್ದು ಪೆಟ್ರೋಲ್ ಬಂಕ್ ಹಾನಿಯಾಗಿದೆ. ಚೆನ್ನೈಟಿ ನಗರದಲ್ಲಿ ಗೋಡೆ ಕುಸಿತದಿಂದ ಮೂರು ಕಾರುಗಳು ಜಖಂಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವ ಅಸ್ತವ್ಯಸ್ಥೆಗೊಂಡಿದೆ. ಇನ್ನು ಚೆನ್ನೈನ ಕಾಸಿಮೇಡು ಭಾಗದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಪ್ರವಾಹದ ಪರಿಹಾರ ವಸ್ತುಗಳು ಹಾಗೂ ಆಹಾರವನ್ನು ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಮಾಂಡೌಸ್ ಚಂಡಮಾರುತದಿಂದಾಗಿ 4 ಜನ ಮೃತಪಟ್ಟಿದ್ದಾರೆ. 98 ಜಾನುವಾರುಗಳು ಮೃತಪಟ್ಟಿವೆ. ಚೆನ್ನೈ ನಗರದಲ್ಲಿ 400 ಮರಗಳು ಬಿದ್ದಿವೆ. 151 ಮನೆಗಳಿಗೆ ಹಾನಿಯಾಗಿವೆ. ಎಲ್ಲೆಡೆ ಪರಿಶೀಲನೆ ನಡೆಸಿದ್ದು, ಪಾಲಿಕೆ ನೌಕರರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.




Leave a Reply

Your email address will not be published. Required fields are marked *

error: Content is protected !!