ಕಿಂಗ್ ಕೊಹ್ಲಿ 40ನೇ ಶತಕ.. ದಾಖಲೆ ಬರೆದ ‘ವಿರಾಟ’

375

ಪುಣೆ: ಟೀಂ ಇಂಡಿಯಾ ನಾಯಕ ವಿರಾಟ ಭರ್ಜರಿ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕರಿಯರ್ ನಲ್ಲಿ ವಿರಾಟ ಕೊಹ್ಲಿ 40 ಶತಕ ದಾಖಲಿಸಿದ ಮೊದಲ ಕ್ಯಾಪ್ಟನ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ನಾಯಕನಾದ ಬಳಿಕ ಟೆಸ್ಟ್ ನಲ್ಲಿ 19 ಹಾಗೂ ಒನ್ ಡೇ ನಲ್ಲಿ 21 ಶತಕ ಬಾರಿಸಿ, 40 ಸೆಂಚ್ಯುರಿ ದಾಖಲಿಸಿದ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಟಿಂಗ್ 41 ಶತಕಗಳನ್ನ ಬಾರಿಸಿದ್ದು, ಅದನ್ನ ಬ್ರೇಕ್ ಮಾಡಲು ಇನ್ನೊಂದು ಶತಕ ಬಾಕಿಯಿದೆ.

Image result for virat kohli 26th test century
26ನೇ ಶತಕ ದಾಖಲಿಸಿದ ವಿರಾಟ ಕೊಹ್ಲಿ

81 ಟೆಸ್ಟ್ ಪಂದ್ಯಗಳಲ್ಲಿ 138 ಇನ್ನಿಂಗ್ಸ್ ಆಡಿರುವ ಕೊಹ್ಲಿ 26ನೇ ಟೆಸ್ಟ್ ಶತಕ ಪೂರೈಯಿಸಿದ್ರು. ವಿರಾಟ ಕೊಹ್ಲಿ ಈ ಹೊಸ ದಾಖಲೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಖುಷಿಗೆ ಕಾರಣವಾಗಿದೆ. ಎರಡನೇ ದಿನದ 2ನೇ ವಿರಾಮದ ಅಂತ್ಯಕ್ಕೆ 415ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡ ಭಾರತ ಉತ್ತಮ ಸ್ಥಿತಿಯಲ್ಲಿದೆ. 156 ರನ್ ಗಳನ್ನ ಬಾರಿಸಿರುವ ಕೊಹ್ಲಿ ಹಾಗೂ 5 ರನ್ ಗಳಿಸಿರುವ ಜಡೇಜಾ ಮೈದಾನದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!