2ನೇ ಪಂದ್ಯ ಗೆದ್ದ ಭಾರತ.. ಕನ್ನಡತಿ ಗಾಯಕ್ವಾಡಗೆ 2 ವಿಕೆಟ್

402

ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಟೀಂ ಗೆಲುವು ದಾಖಲಿಸಿದೆ. 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 191ರನ್ ಗಳಿಸಿದ್ದ ಮಿಥಾಲಿ ಪಡೆ, 53 ರನ್ ಗಳಿಂದ ಗೆಲುವು ದಾಖಲಿಸಿದೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಪೂನಂ ರಾವುತ್ 77, ಹರ್ಮನ್ ಪ್ರಿತ್ ಕೌರ್ 46, ಮಿಥಾಲಿ ರಾಜ್ 40 ರನ್ ಬಾರಿಸಿ ಮಿಂಚಿದ್ರು. ಇಂಡೀಸ್ ಪರ ಅಲೆನೆ, ಫ್ಲೆಟ್ಚರ್ ತಲಾ ಎರಡು ವಿಕೆಟ್ ಪಡೆದ್ರು.

192 ರನ್ ಗಳ ಗುರಿ ಬೆನ್ನು ಹತ್ತಿದ್ದ ಇಂಡೀಸ್ ಟೀಂ, 47.2 ಓವರ್ ಗಳಲ್ಲಿ 138ಕ್ಕೆ ಆಲೌಟ್ ಆಯ್ತು. ಇದ್ರಿಂದಾಗಿ ಭಾರತ 53 ರನ್ ಗಳ ಗೆಲುವು ಸಾಧಿಸಿತು. ಸೆಮೈನ್ ಕಾಂಪಬಿಲ್ಲೆ 39 ರನ್ ಗಳಿಸಿದ್ದೆ ಹೆಚ್ಚಿನ ಸ್ಕೋರ್. ಇಂಡಿಯಾ ಪರ ದೀಪ್ತಿ ಶರ್ಮಾ, ಪೂನಂ ಯಾದವ್ ಹಾಗೂ ಕರ್ನಾಟಕ ಮೂಲದ ರಾಜೇಶ್ವರಿ ಗಾಯಕ್ವಾಡ್ ತಲಾ ಎರಡು ವಿಕೆಟ್ ಪಡೆದ್ರು. ಗೋಸ್ವಾಮಿ, ಶಿಖಾ ಪಾಂಡೆ ಒಂದೊಂದು ವಿಕೆಟ್ ಪಡೆದ್ರು.

ಪೂನಂ ರಾವತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ್ರು. 3 ಪಂದ್ಯಗಳ ಸರಣಿಯಲ್ಲಿ 1-1 ಗೆಲುವಿನ ಮೂಲಕ ಸಮಬಲ ಸಾಧಿಸಿದ್ದು, 3ನೇ ಏಕದಿನ ಪಂದ್ಯ ನವೆಂಬರ್ 6ರಂದು ಅಂಟಿಗಾದಲ್ಲಿ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!