ಸೋಲು ಗೆಲುವು ಶಾಶ್ವತವಲ್ಲ.. ನಿಮ್ಮ ಸಾಧನೆಗೊಂದು ಸಲಾಂ

477

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2020ನಲ್ಲಿ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕದ ಹೋರಾಟಕ್ಕಾಗಿ ನಡೆದ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಮತ್ತೊಂದು ಪದಕ ಬರುವ ನಿರೀಕ್ಷೆ ಹುಸಿಯಾಗಿದೆ.

ಗ್ರೇಟ್ ಬ್ರಿಟನ್ ವಿರುದ್ಧ 3-4 ಅಂತರದಿಂದ ವಿರೋಚಿತಸ ಸೋಲು ಅನುಭವಿಸಿದೆ. ಹೀಗಾಗಿ ರಾಣಿ ರಾಂಪಾಲ್ ತಂಡದ ಕಂಚಿನ ಪದಕದ ಕನಸು ನುಚ್ಚು ನೂರಾಯ್ತು. ಗ್ರೇಟ್ ಬ್ರಿಟನ್ ವಿರುದ್ಧ ಸಾಕಷ್ಟು ಸೆಣಸಾಟ ನಡೆಸಿತು. ಸೋಲನ್ನ ಸಹ ಅಷ್ಟೊಂದು ಸುಲಭದಲ್ಲಿ ಒಪ್ಪಿಕೊಂಡಿಲ್ಲ. ಹೀಗಾಗಿ 3-4ರಿಂದ ಸೋತಿದೆ.

ಮೊದಲ ಬಾರಿಗೆ ಸೆಮಿಫೈನಲ್ ವರೆಗೂ ಬಂದ ಮಹಿಳಾ ಹಾಕಿ ತಂಡಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೋಲು ಗೆಲುವು ಶಾಶ್ವತವಲ್ಲ. ನೀವು ಮಾಡಿದ ಸಾಧನೆ ನಿಜಕ್ಕೂ ದೊಡ್ಡದು ಎಂದು ಎಲ್ಲರೂ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!