ಲವ್, ಸೆಕ್ಸ್, ಧೋಖಾ: ಕಿರಾತಕ ಅಂದರ್

762

ಬೆಂಗಳೂರು: ಫೇಸ್ ಬುಕ್ ಮೂಲಕ ಪರಿಚಯವಾದ ಅಪ್ರಾಪ್ತೆಯನ್ನ ನಂಬಿಸಿ ಮೋಸ ಮಾಡಿದ ಕಾಮುಕನನ್ನ ಅರೆಸ್ಟ್ ಮಾಡಲಾಗಿದೆ. ಅಭಿಷೇಕಗೌಡ ಅಲಿಯಾಸ್ ಧನುಷ ಬಂಧಿತ ಆರೋಪಿಯಾಗಿದ್ದಾನೆ.

ತುಮಕೂರು ಜಿಲ್ಲೆ ಮಧುಗಿರಿ ಮೂಲದ 26 ವರ್ಷದ ಅಭಿಷೇಕಗೌಡ, ಜೂಜಾಟ, ಹೆಣ್ಮಕ್ಕಳ ಸಹವಾಸ ಹೊಂದಿದ್ದ. ಈತ ನಕಲಿ ಫೇಸ್ ಬುಕ್ ಖಾತೆ ಮೂಲಕ, 17 ವರ್ಷದ ಹುಡ್ಗಿಯನ್ನ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯನ್ನ ಪ್ರೀತಿಸುವುದಾಗಿ ನಂಬಿಸಿ, ಆಕೆಯಿಂದ ಒಡುವೆ ಹಾಗೂ ಹಣ ಪಡೆದಿದ್ದ. ಅದನ್ನ ವಾಪಸ್ ಕೇಳಿದ ಹುಡ್ಗಿಯನ್ನ ಲಾಡ್ಜ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಪೋಷಕರು ಆರೋಪಿಸಿದ್ದಾರೆ.

ಪೋಷಕರು ನೀಡಿದ ದೂರಿನನ್ವಯ ನಂದನಿ ಬಡಾವಣೆ ಠಾಣೆ ಪೊಲೀಸ್ರು ಕಾಮುಕನನ್ನ ಬಂಧಿಸಿ, 11 ಲಕ್ಷ ಮೌಲ್ಯದ 272 ಗ್ರಾಮ ಚಿನ್ನಾಭರಣ ವಶ ಪಡಿಸಿಕೊಂಡು, ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ.

ಕಿರಾತಕ ಅಭಿಷೇಕಗೌಡ ಅಲಿಯಾಸ ಧನುಷ, ಮಧುಗಿರಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ನಕಲಿ ಫೇಸ್ ಬುಕ್ ಖಾತೆಯ ಮೂಲಕ ಹುಡ್ಗಿಯರ ಪರಿಚಯ ಮಾಡಿಕೊಂಡು ಮೋಸ ಮಾಡ್ಕೊಂಡು ಬಂದಿದ್ದಾನೆ. ಈತನ ಫೇಸ್ ಬುಕ್ ಖಾತೆಯಲ್ಲಿ 2,314 ಮಹಿಳೆಯರು ಫ್ರೆಂಡ್ ಇದ್ದಾರೆ. ಸುಮಾರು 50 ಮಹಿಳೆಯ ಜೀವನದ ಚೆಲ್ಲಾಟವಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!